ಕರ್ನಾಟಕ

karnataka

ETV Bharat / briefs

ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ತಂದ​ ಬುಮ್ರಾ ಗಾಯ.... ಭಯಪಡುವ ಅಗತ್ಯವಿಲ್ಲ ಎಂದ ಪ್ರಾಂಚೈಸಿ - ಜಸ್ಪ್ರೀತ್​ ಬುಮ್ರಾ

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್​ 2019ರ 3ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಿದ್ದವು. ಈ ಪಂದ್ಯದ ಕೊನೆಯ ಓವರ್​ನ ಕೊನೆಯ ಎಸೆತ ಎಸೆದ ಬುಮ್ರಾ ಬ್ಯಾಟ್ಸಮನ್​ ಹೊಡೆದ ಚೆಂಡನ್ನು ಹಿಡಿಯಲು ಹೋಗಿ ಎಡಗೈ ಭುಜದ ನೋವಿಗೆ ತುತ್ತಾಗಿದ್ದಾರೆ.

bumrah

By

Published : Mar 25, 2019, 7:34 PM IST

ಮುಂಬೈ: ವಿಶ್ವಕಪ್​ ತಂಡಕ್ಕೆ ಆಧಾರ ಸ್ಥಂಭವಾಗಿರುವ ಜಸ್ಪ್ರೀತ್​ ಬುಮ್ರಾ ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್​​​ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿ ಕೋಟ್ಯಂತರ ಕ್ರಿಕೆಟ್​ ಅಭಿಮಾನಿಗಳಿಗೆ ಆತಂಕ ತಂದೊಡ್ಡಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್​ 2019ರ 3 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಿದ್ದವು. ಈ ಪಂದ್ಯದ ಕೊನೆಯ ಓವರ್​ನ ಕೊನೆಯ ಎಸೆತ ಎಸೆದ ಬುಮ್ರಾ ಬ್ಯಾಟ್ಸಮನ್​ ಹೊಡೆದ ಚೆಂಡನ್ನು ಹಿಡಿಯಲು ಹೋಗಿ ಎಡಗೈ ಭುಜದ ನೋವಿಗೆ ಒಳಗಾಗಿ ಕೆಳಗೆ ಬಿದ್ದರು.

ಬುಮ್ರಾ ನೆಲದ ಮೇಲೆ ಬಿದ್ದು ನೋವಿನಿಂದ ಒದ್ದಾಡುತ್ತಿದ್ದಂತೆ ಪಿಸಿಯೋ ತಕ್ಷಣ ಮೈದಾನಕ್ಕೆ ಬಂದು ಚಿಕಿತ್ಸೆ ನೀಡಿದ್ದರು. ಆದರೆ ಈ ಘಟನೆ ಮುಂಬೈ ಇಂಡಿಯನ್ಸ್​ಗಿಂತ ಕೋಟ್ಯಂತರ ಕ್ರೀಡಾಭಿಮಾನಿಗಳಿಗೆ ಆಘಾತ ತಂದಿದ್ದು ಸುಳ್ಳಲ್ಲ. ಐಸಿಸಿ ವಿಶ್ವಕಪ್​ಗೆ ಕೇವಲ 2 ತಿಂಗಳಿರುವಾಗ ಭಾರತ ತಂಡದ ಪ್ರಮುಖ ಬೌಲರ್​ ಆದ ಬುಮ್ರಾಗೆ ಗಾಯವಾದರೆ ಕಂಡಿತ ಇದು ತಂಡಕ್ಕೆ ದೊಡ್ಡ ಹೊಡೆತವಾಗುತ್ತದೆ ಎಂಬ ಭಯ ಎಲ್ಲರಲ್ಲೂ ಮನೆಮಾಡಿತ್ತು.

ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್​ ಆಡಳಿತ ಮಂಡಳಿ ಬುಮ್ರಾಗೆ ಯಾವುದೇ ರೀತಿಯ ಸೀರಿಯಸ್​ ಇಂಜುರಿಯಾಗಿಲ್ಲ ಎಂದು ತಿಳಿಸಿದೆ. ಕೇವಲ ಭುಜಕ್ಕೆ ಸಣ್ಣ ಪೆಟ್ಟಾಗಿತ್ತು. ಬುಮ್ರಾ ಫಿಟ್​ ಆಗಿದ್ದಾರೆ ಎಂದು ತಿಳಿಸಿರುವುದು ಇದೀಗ ಅಭಿಮಾನಿಗಳಲ್ಲಿ ಸಮಾಧಾನ ತಂದಿದೆ.

ನಿನ್ನೆ ನಡೆದ ಪಂದ್ಯದಲ್ಲಿ ರಿಷಭ್​ ಅಬ್ಬರಕ್ಕೆ ಸಿಲುಕಿದ ಮುಂಬೈ ತನ್ನ ಮೊದಲ ಪಂದ್ಯದಲ್ಲೇ 37 ರನ್​ಗಳ ಸೋಲನುಭವಿಸಿತು. ಪಂತ್​ ಕೇವಲ 27ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ 78 ರನ್​ಗಳಿಸಿ ಮುಂಬೈಗೆ ಆಘಾತ ನೀಡಿದ್ದರು.

ABOUT THE AUTHOR

...view details