ಕರ್ನಾಟಕ

karnataka

ETV Bharat / briefs

ನೂರು ಡಿಕೆಶಿಗಳು ಬಂದರೂ ಕುಂದಗೋಳ ಗೆಲ್ಲೋದು ಬಿಜೆಪಿ- ಜಗದೀಶ್ ಶೆಟ್ಟರ್ ವಿಶ್ವಾಸ -

ಈಗ ನಿಖಿಲ್ ಎಲ್ಲಿದೀಯಪ್ಪಾ ಎನ್ನುವ ಪ್ರಶ್ನೆ ಶುರುವಾಗಿದೆ. ಹೋಮ‌-ಹವನ ಮಾಡೋದ್ರಿಂದ ಮೆಷಿನ್‌ನಲ್ಲಿರುವ ವೋಟು ಬದಲಾಗುತ್ತಾ..?. ಬಿಜೆಪಿ ಸರ್ಕಾರ‌ವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಕುಂದಗೋಳ ಮತದಾರರ ಮೇಲಿದೆ. ನಿಮ್ಮ ಮತದಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದರು ಜಗದೀಶ್ ಶೆಟ್ಟರ್.

ಜಗದೀಶ್​ ಶೆಟ್ಟರ್​

By

Published : May 6, 2019, 9:58 AM IST

ಹುಬ್ಬಳ್ಳಿ:ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಿಸಿದ್ದಾರೆ‌. ಯಾಕೆ ಕಾಂಗ್ರೆಸ್‌ನಲ್ಲಿರುವ ಉತ್ತರ ಕರ್ನಾಟಕದ ನಾಯಕರಿಗೆ ಧಮ್‌ ಇಲ್ವಾ,..? ಡಿಕೆಶಿನೇ ಬರಬೇಕಾ? ಎಂದು ಮಾಜಿ ಸಿಎಂ ಜಗದೀಶ್ ಪ್ರಶ್ನಿಸಿದ್ದಾರೆ.

jagadeesh shetter
ಕುಂದಗೋಳ ವಿಧಾನ ಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಪರ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನೂರು ಜನ ಡಿಕಶಿಗಳು ಬಂದ್ರೂ ಏನು ಆಗಲ್ಲ. ಇದು ಕುಂದಗೋಳ ಕ್ಷೇತ್ರದ ಸ್ವಾಭಿಮಾನದ ಚುನಾವಣೆ. ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತುಕೊಳ್ಳಲಾಗದ ಪಪ್ಪು ಇವರ ನಾಯಕ ಎಂದು ಲೇವಡಿ ಮಾಡಿದರು.‌ ಕುಂದಗೋಳ ಮತ್ತು ಚಿಂಚೋಳಿ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕುಂದಗೋಳಕ್ಕೆ ಏನು ಮಾಡಿದ್ದೀರಿ ಪಟ್ಟಿ ಕೊಡಿ ಎಂದು ಶೆಟ್ಟರ್​ ಪ್ರಶ್ನಿಸಿದರು. ದೇವೇಗೌಡ, ಕುಮಾರಸ್ವಾಮಿಯವರು ಈಗ ಹೋಮ-ಹವನ ಆರಂಭಿಸಿದ್ದಾರೆ. ಈಗ ನಿಖಿಲ್ ಎಲ್ಲಿದೀಯಪ್ಪಾ ಎನ್ನುವ ಪ್ರಶ್ನೆ ಶುರುವಾಗಿದೆ. ಹೋಮ‌-ಹವನ ಮಾಡೋದ್ರಿಂದ ಮೆಷಿನ್‌ನಲ್ಲಿರುವ ವೋಟು ಬದಲಾಗುತ್ತಾ..?. ಬಿಜೆಪಿ ಸರ್ಕಾರ‌ವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಕುಂದಗೋಳ ಮತದಾರರ ಮೇಲಿದೆ. ನಿಮ್ಮ ಮತದಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದರು ಜಗದೀಶ್ ಶೆಟ್ಟರ್.

For All Latest Updates

TAGGED:

ABOUT THE AUTHOR

...view details