ಕರ್ನಾಟಕ

karnataka

ETV Bharat / briefs

ಬಿಜೆಪಿ ಅಭ್ಯರ್ಥಿ ಕಾರು ಧ್ವಂಸ, ಕಮಲ ಮುಖಂಡನ ಮೇಲೆ ಹಲ್ಲೆ ... ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೂಂಡಾಗಿರಿ - ಪಶ್ಚಿಮ ಬಂಗಾಳ

ದೀದಿ ನಾಡಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕೊನೆಯ ಹಂತದ ಮತದಾನದ ವೇಳೆ ಕೂಡ ಬಿಜೆಪಿ-ಟಿಎಂಸಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಬಿಜೆಪಿ ಮುಖಂಡನ ಮೇಲೆ ಹಲ್ಲೆ

By

Published : May 19, 2019, 12:16 PM IST

ಕೋಲ್ಕತ್ತಾ:ಕೊನೆಯ ಹಂತದ ವೋಟಿಂಗ್​ ವೇಳೆ ಕೂಡ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ ತನ್ನ ಗೂಂಡಾ ವರ್ತನೆ ಮುಂದುವರೆಸಿದ್ದು, ಬಿಜೆಪಿ ಅಭ್ಯರ್ಥಿಯ ಕಾರಿನ ಮೇಲೆ ದಾಳಿ ನಡೆಸಿ ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ.

ಪಶ್ಚಿಮ ಬಂಗಾಳದ ಜಾದವಪುರ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನುಪಮ್​ ಹಜಾರೆ ಕಾರಿನ ಮೇಲೆ ಟಿಎಂಸಿ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರಿನ ಕ್ಲಾಸ್​ ಒಡೆದು ಹಾಕಿದ್ದಾರೆ.

ಇದೇ ವೇಳೆ ಮಾತನಾಡಿರುವ ಅನುಪಮ್​, ರಾಜ್ಯದಲ್ಲಿ ಟಿಎಂಸಿ ಗೂಂಡಾಗಿರಿ ವರ್ತನೆ ಮುಂದುವರೆಸಿದ್ದು, ಬಿಜೆಪಿಗೆ ವೋಟ್​ ಮಾಡಲು ಮುಂದಾಗುತ್ತಿದ್ದವರ ಮೇಲೆ ಹಲ್ಲೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಇದರ ಮಧ್ಯೆ ಟಿಎಂಸಿ ಜಾದವಪುರ್​ನ ಬಿಜೆಪಿ ಮಂಡಲ್​ ಅಧ್ಯಕ್ಷನ ಮೇಲೂ ಹಲ್ಲೆ ಮಾಡಿದೆ ಎಂದಿದ್ದಾರೆ.

ABOUT THE AUTHOR

...view details