ಮ್ಯೂನಿಕ್: ಜರ್ಮನಿಯ ಮ್ಯೂನಿಕ್ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನ ಪುರುಷರ 10 ಮೀ. ಏರ್ ಪಿಸ್ತೂಲ್ನಲ್ಲಿ 17 ವರ್ಷದ ಸೌರಭ್ ಚೌಧರಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ನಿಲ್ಲದ 17ರ ಪೋರನ ಚಿನ್ನದ ಬೇಟೆ... ವಿಶ್ವದಾಖಲೆಯೊಂದಿಗೆ ಬಂಗಾರ ಗೆದ್ದ ಸೌರಭ್ ಚೌಧರಿ - ಮನು ಬಾಕರ್
17 ವರ್ಷದ ಸೌರಭ್ ಚೌಧರಿ ಮ್ಯೂನಿಚ್ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನ ಪುರುಷರ 10 ಮೀ. ಏರ್ ಪಿಸ್ತೂಲ್ನಲ್ಲಿ ಚಿನ್ನ ಗೆದ್ದಿದ್ದಾರೆ.
ಸೋಮುವಾರ ನಡೆದ 10 ಮೀ. ಏರ್ ಪಿಸ್ತೂಲ್ ಫೈನಲ್ನಲ್ಲಿ 246.3 ಅಂಕ ಗಳಿಸುವ ಮೂಲಕ ಚಿನ್ನದ ಪದಕ ಗೆಲ್ಲುವುದರ ಜೊತೆಗೆ, ತಮ್ಮ ಹೆಸರಿನಲ್ಲೇ ಇದ್ದ 245 ಅಂಕಗಳ ದಾಖಲೆಯನ್ನು ಮುರಿದು ವಿಶ್ವದಾಖಲೆ ನಿರ್ಮಿಸಿದರು. ಕಿರಿಯರ ಹಾಗೂ ಹಿರಿಯರ 10 ಮೀಟರ್ ವಿಭಾಗದಲ್ಲಿ ಎರಡು ವಿಶ್ವ ದಾಖಲೆಗಳು ಸೌರಭ್ ಹೆಸರಲ್ಲೇ ಇದೆ.
ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ರಾಹಿ ಸರ್ನೊಬತ್ ಚಿನ್ನ ಗೆದ್ದರು. ಈ ಸಾಧನೆಯ ಜೊತೆಗೆ 2020ರ ಟೋಕಿಯೋ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡರು. ಇನ್ನು ಮಿಕ್ಸೆಡ್ ಡಬಲ್ಸ್ನಲ್ಲಿ ಚೌಧರಿ ಹಾಗೂ ಮನು ಬಾಕರ್ ಜೊತೆಗೂಡಿ ಚೀನಾದ ಜಿಯಾಂಗ್ ರಾನ್ಕ್ಷಿಂಗ್ ಹಾಗೂ ಪಂಗ್ ವೈ ಜೋಡಿಯನ್ನು ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.