ಕರ್ನಾಟಕ

karnataka

ETV Bharat / briefs

ಗುರಿ ತಲುಪದ ನೌಕೆ... ಇಸ್ರೇಲ್​ ಚಂದ್ರಯಾನದ ಕನಸು ವಿಫಲ - ಚಂದ್ರನ ಮೇಲ್ಮೈ

ಚಂದ್ರನ ಸಮೀಪಕ್ಕೆ ತಲುಪಿದ್ದ ಬೆರೆಶೀಟ್​ ನೌಕೆಯು ಎಂಜಿನ್​ ವಿಫಲವಾದ ಕಾರಣ ನಿಧಾನವಾಗಿ ಕೆಳಗಿಳಿಯದೆ ಚಂದ್ರನ ಮೇಲ್ಮೈ ಮೇಲೆ ದೊಪ್ಪನೆ ಬಿದ್ದಿದೆ. ಪರಿಣಾಮವಾಗಿ ನೌಕೆ ಹಾಗೂ ಅದಕ್ಕೆ ಅಳವಡಿಸಿದ್ದ ಉಪಗ್ರಹಗಳು ನುಚ್ಚು ನೂರಾಗಿದೆ.

ಚಂದ್ರಯಾನ

By

Published : Apr 12, 2019, 1:43 PM IST

ಟೆಲ್​ ಅವಿವ್​: ಚಂದ್ರನ ಮೇಲೆ ತನ್ನ ನೌಕೆ ಇಳಿಸಬೇಕೆನ್ನುವ ಇಸ್ರೇಲ್​ನ ಕನಸು ವಿಫಲವಾಗಿದ್ದು, ಸ್ವಲ್ಪದರಲ್ಲೇ ಎಡವಿದೆ.

ಚಂದ್ರನ ಸಮೀಪಕ್ಕೆ ತಲುಪಿದ್ದ ಬೆರೆಶೀಟ್​ ನೌಕೆಯು ಎಂಜಿನ್​ ವಿಫಲವಾದ ಕಾರಣ ನಿಧಾನವಾಗಿ ಕೆಳಗಿಳಿಯದೆ ಚಂದ್ರನ ಮೇಲ್ಮೈ ಮೇಲೆ ದೊಪ್ಪನೆ ಬಿದ್ದಿದೆ. ಪರಿಣಾಮವಾಗಿ ನೌಕೆ ಹಾಗೂ ಅದಕ್ಕೆ ಅಳವಡಿಸಿದ್ದ ಉಪಗ್ರಹಗಳು ನುಚ್ಚು ನೂರಾಗಿದೆ.

ಮಹತ್ವಾಕಾಂಕ್ಷೆಯ ಬೆರೆಶೀಟ್​ ಚಂದ್ರಯಾನವನ್ನು ಪೂರೈಸುವ ಉದ್ದೇಶದಿಂದ ಇಸ್ರೇಲ್​ ಬಾಹ್ಯಾಕಾಶ ಸಂಸ್ಥೆಯು ಹಗಲು ರಾತ್ರಿ ಶ್ರಮಿಸಿತ್ತು. ಭಾರತ ಕೈಗೊಂಡಿದ್ದ ಮಂಗಳಯಾನವು ಇದಕ್ಕೆ ಸ್ಫೂರ್ತಿ ಎಂದೂ ಹೇಳಿಕೊಂಡಿತ್ತು.

ಇಸ್ರೇಲ್​ ಒಂದು ವೇಳೆ ಈ ಯೋಜನೆ ಪೂರ್ಣಗೊಳಿಸಿದ್ದರೆ ಚಂದ್ರಯಾನ ಪೂರೈಸಿದ ಅಮೆರಿಕ, ಚೀನಾ, ರಷ್ಯಾ ನಂತರದ ಸ್ಥಾನವನ್ನು ಪಡೆದುಕೊಳ್ಳುತ್ತಿತ್ತು.

ABOUT THE AUTHOR

...view details