ಕೊಲಂಬೋ: ನೆರೆಯ ದೇಶ ಶ್ರೀಲಂಕಾದಲ್ಲಿ ಮೊನ್ನೆ ನಡೆದ ಭೀಕರ ಬಾಂಬ್ ಸ್ಫೋಟ ನಡೆಸಿದ್ದು ನಾವೇ ಎಂದು ಐಸಿಸ್ ಉಗ್ರರು ಒಪ್ಪಿಕೊಂಡಿದ್ದಾರೆ.
ಆದರೆ, ದಾಳಿ ನಡೆಸಿರುವುದಕ್ಕೆ ಇಸಿಸ್ ಸ್ಟೇಟ್ ಈವರೆಗೆ ಯಾವುದೇ ಸಾಕ್ಷಾಧಾರಗಳನ್ನು ನೀಡಿಲ್ಲ.
ಶ್ರೀಲಂಕಾ ದಾಳಿಯ ಹೊಣೆ ಹೊತ್ತುಕೊಂಡ ಐಸಿಸ್ ! ಸಿಸಿಟಿವಿಯಲ್ಲಿ ಸೆರೆಯಾದ ಶಂಕಿತ ದಾಳಿಕೋರನ ದೃಶ್ಯ! - Islamic State claims responsibility for lanka blasts
ಶ್ರೀಲಂಕಾದಲ್ಲಿ ಮೊನ್ನೆ ನಡೆದ ರಕ್ತಚರಿತೆಗೆ ನಾಂದಿ ಹಾಡಿದ್ದು ನಾವೇ ಎಂದು ಐಸಿಸ್ ಉಗ್ರರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಐಸಿಸ್‌ನ ಮುಖವಾಣಿ ಅಮಾಕ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಶಂಕಿತ ಮಾನವ ಬಾಂಬರ್
ಅದೇ ರೀತಿ ಶಂಕಿತ ದಾಳಿಕೋರನ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದರಲ್ಲಿ ಬ್ಯಾಕ್‌ಪ್ಯಾಕ್ ಹಾಕಿಕೊಂಡಿರುವ ದಾಳಿಕೋರ ಸೈಂಟ್ ಸಬಾಸ್ಟಿಯನ್ ಚರ್ಚ್‌ಗೆ ಬರುತ್ತಿರುವ ದೃಶ್ಯಾವಳಿಗಳಿವೆ. ಈತ ಚರ್ಚ್ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ಬಾಂಬ್ ಸ್ಫೋಟಗೊಂಡಿದೆ. ಈ ಬಗ್ಗೆ ಶ್ರೀಲಂಕಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೊಲಂಬೋದ 8 ಕಡೆಗಳಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 321 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡು, 500 ಜನರು ಗಾಯಗೊಂಡಿದ್ದರು. ಈ ಘಟನೆಯಲ್ಲಿ ರಾಜ್ಯದ 5 ಜನರ ಸಾವನ್ನಪ್ಪಿದ್ದರು.
Last Updated : Apr 23, 2019, 5:22 PM IST