ಕುಕ್ಕೆ ಸುಬ್ರಹ್ಮಣ್ಯಕ್ಕೆ ಈಶ್ವರ್ ಖಂಡ್ರೆ ಭೇಟಿ: ದೇವರ ದರ್ಶನ, ವಿಶೇಷ ಪೂಜೆ - kukke subramanya temple
ಕೊರೊನಾ ಮಹಾ ಕಂಟಕದಿಂದ ಸರ್ವರನ್ನು ಪಾರು ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪರಿವಾರ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ಸುಬ್ರಹ್ಮಣ್ಯ:ಕರ್ನಾಟಕ ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ, ಶಾಸಕ ಈಶ್ವರ್ ಖಂಡ್ರೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಮರ್ದಾಳ ಜಂಕ್ಷನ್ ಬಳಿ ಈಶ್ವರ್ ಖಂಡ್ರೆಯವರನ್ನು ಕಡಬ ಯುವಕ ಕಾಂಗ್ರೆಸ್ ವತಿಯಿಂದ ಸ್ವಾಗತಿಸಿ, ಅಭಿನಂದಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ ಈಶ್ವರ್ ಖಂಡ್ರೆ, ಕೊರೊನಾ ನಿಮಿತ್ತ ಸಂಕಷ್ಟದಲ್ಲಿರುವ ಜಗತ್ತು ಆದಷ್ಟು ಶೀಘ್ರವಾಗಿ ಕಂಟಕ ಮುಕ್ತವಾಗಲಿ. ರಾಜ್ಯ ಹಾಗೂ ದೇಶದ ಜನರ ಸಂಕಷ್ಟ ನಿವಾರಣೆಯಾಗಲಿ ಎಂಬ ಉದ್ದೇಶದಿಂದ ಕುಟುಂಬ ಸಮೇತರಾಗಿ ಪ್ರಾರ್ಥಿಸಲು ಬಂದಿದ್ದಾಗಿ ತಿಳಿಸಿದರು.