ಕರ್ನಾಟಕ

karnataka

ETV Bharat / briefs

ಆಂಧ್ರಕ್ಕೆ ಎಂಟ್ರಿ ಕೊಟ್ರಾ ಲಂಕಾ ಉಗ್ರರು?... ಖಾಲಿ ಬೋಟ್​​​ ಹುಟ್ಟುಹಾಕಿದೆ ಹಲವು ಅನುಮಾನ - coastla area

ಬೋಟ್​ ದೊರೆತ ಪೊನ್ನಪುಡಿ ಪಥುರು ಗ್ರಾಮದಲ್ಲಿ ಈಗ ಆತಂಕ ಎದುರಾಗಿದ್ದು, ಪೊಲೀಸರು ಸುತ್ತಮುತ್ತಲ ಪ್ರದೇಶಗಳಲ್ಲಿ ಇನ್ನಷ್ಟು ಸಾಕ್ಷಿಗಳು ಸಿಗಬಹುದೇ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

ಖಾಲಿ ಬೋಟ್

By

Published : May 22, 2019, 1:20 PM IST

ನೆಲ್ಲೂರು:ಆಂಧ್ರ ಪ್ರದೇಶದನೆಲ್ಲೂರಿನಲ್ಲಿ ಪತ್ತೆಯಾಗಿರುವ ಮೀನುಗಾರಿಕಾ ದೋಣಿಯೊಂದು ಸುತ್ತಮುತ್ತಲಿನವರಲ್ಲಿ ಆತಂಕ ಉಂಟುಮಾಡಿದ್ದು, ಆಂಧ್ರ ಪ್ರದೇಶಕ್ಕೆ ಶ್ರೀಲಂಕಾ ಉಗ್ರರು ಎಂಟ್ರಿ ಕೊಟ್ಟಿದ್ದಾರಾ ಎಂಬ ಅನುಮಾನ ಹುಟ್ಟಿಹಾಕಿದೆ.

ನೆಲ್ಲೂರಿನ ವಿದವಲೂರ್​ ಕರಾವಳಿ ತೀರದಲ್ಲಿ ಮೀನುಗಾರಿಕಾ ದೋಣಿಯೊಂದು ಅನುಮಾನಾಸ್ಪದವಾಗಿ ಕಂಡುಬಂದಿದೆ. ಸ್ಥಳೀಯ ಮೀನುಗಾರರು ಇದನ್ನು ಪತ್ತೆ ಮಾಡಿ ಪೊಲೀಸರ ಗಮನಕ್ಕೆ ತಂದರು. ಬುಧವಾರ ಬೆಳಗ್ಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಉಪಗ್ರಹ ಉಡಾವಣೆ ಹಮ್ಮಿಕೊಂಡಿದ್ದರಿಂದ ಅದನ್ನು ತಡೆಯಲು ಉಗ್ರರು ಬಂದಿದ್ದರೇ ಎಂಬ ಅನುಮಾನ ವ್ಯಕ್ತವಾಯಿತು.

ಈ ಬೋಟ್​ ಎಲ್ಲಿಂದ ಬಂತು ಎಂಬುದನ್ನು ಪರಿಶೀಲಿಸಲಾಗಿದೆ. ನೋಂದಣಿ ಸಂಖ್ಯೆ ಎಲ್ಲವನ್ನೂ ನೋಡಿದಾಗ ಬೋಟ್ ಲಂಕಾದಿಂದ ಬಂದಿದೆ ಎನ್ನುವುದು ಖಚಿತವಾಗಿದೆ.

ಬೋಟ್​ ದೊರೆತ ಪೊನ್ನಪುಡಿ ಪಥುರು ಗ್ರಾಮದಲ್ಲಿ ಈಗ ಆತಂಕ ಎದುರಾಗಿದ್ದು, ಪೊಲೀಸರು ಸುತ್ತಮುತ್ತಲ ಪ್ರದೇಶಗಳಲ್ಲಿ ಇನ್ನಷ್ಟು ಸಾಕ್ಷಿಗಳು ಸಿಗಬಹುದೇ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

ಲಂಕಾದಿಂದ ಪ್ರಯಾಣ ಮಾಡಲು ಅಥವಾ ಆಂಧ್ರ ಕರಾವಳಿ ತಲುಪಿದ ನಂತರ ಅವಿತುಕೊಳ್ಳಲು ಈ ಬೋಟ್​ ಬಳಸಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ.

ABOUT THE AUTHOR

...view details