ಕರ್ನಾಟಕ

karnataka

ETV Bharat / briefs

138 ಆಲೌಟ್​ ಆದ ಅಫ್ಘಾನಿಸ್ತಾನ... ಐರ್ಲೆಂಡ್ ತಂಡಕ್ಕೆ ​ 72 ರನ್​ಗಳ ಜಯ - ಐರ್ಲೆಂಡ್

ವಿಶ್ವಕಪ್​ನಲ್ಲಿ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಶಾಕ್​ ನೀಡುವ ಹಂಬಲದಲ್ಲಿದ್ದ ಅಫ್ಘಾನಿಸ್ತಾನ ತಂಡಕ್ಕೆ ಐರ್ಲೆಂಡ್​ ತಂಡ 72 ರನ್​ಗಳಿಂದ ಮಣಿಸಿ ವಿಶ್ವಕಪ್​ಗೂ ಮುನ್ನ ಅಫ್ಘಾನ್​ ತಂಡದ ಆತ್ಮವಿಶ್ವಾಸಕ್ಕೆ ದಕ್ಕೆ ಉಂಟುಮಾಡಿದೆ

ಐರ್ಲೆಂಡ್​

By

Published : May 20, 2019, 12:25 PM IST

ಬೆಲ್ಫಾಸ್ಟ್​(ಐರ್ಲೆಂಡ್​): ಕಳೆದರಡು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚುತ್ತಿರುವ ಅಫ್ಘಾನಿಸ್ತಾನ ತಂಡಕ್ಕೆ ಐರ್ಲೆಂಡ್​ 72 ರನ್​ಗಳ ಸೋಲುಣಿಸುವ ಮೂಲಕ ವಿಶ್ವಕಪ್​ಗೆ ಆಯ್ಕೆಯಾಗಿರುವ ಅಫ್ಘನ್ನರಿಗೆ ಶಾಕ್​ ನೀಡಿದ್ದಾರೆ.

ನಿನ್ನೆ ನಡೆದ ದ್ವಿಪಕ್ಷೀಯ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಐರ್ಲೆಂಡ್​ 210 ರನ್​ಗಳಿಸಿತ್ತು. ಆಲ್​ರೌಂಡರ್​ ಪಾಲ್​ ಸ್ಟರ್ಲಿಂಗ್​ 71 ರನ್​ ಹಾಗೂ ನಾಯಕ ವಿಲಿಯಂ ಪೋರ್ಟ್​ಫೀಲ್ಡ್​ 53 ಹಾಗೂ ಕೆವಿನ್​ ಒ ಬ್ರಿಯಾನ್​ 32 ರನ್​ಗಳಿಸಿದರು. ಆಫ್ಘಾನ್​ ಪರ ರಶೀದ್​ 2, ದವ್ಲಾತ್​ ಜಾರ್ಡನ್​ 3, ಅಫ್ಟಾಬ್​ ಆಲಂ 3 ವಿಕೆಟ್​ ಪಡೆದರು.

211 ರನ್​ಗಳ ಗುರಿ ಬೆನ್ನಿತ್ತಿದ ಅಫ್ಘನ್ನರು ಐರ್ಲೆಂಡ್​ ಬೌಲಿಂಗ್​​ದಾಳಿಗೆ ​ಸಿಲುಕಿ ಕೇವಲ 138 ರನ್​ಗಳಿಗೆ ಆಲೌಟ್​ ಆಗಿ 72 ರನ್​ಗಳ ಹೀನಾಯ ಸೋಲನುಭವಿಸಿದರು. ನಬಿ 20, ಅಸ್ಘರ್​ ಅಫ್ಘನ್​ 29, ನೈಬ್​ 20 ರನ್​ಗಳಿಸಿದ್ದು ಬಿಟ್ಟರೆ ತಂಡದ ದಾಂಡಿಗರು ಐರಿಸ್​ ಬೌಲರ್​ಗಳನ್ನು ಎದುರಿಸಲು ವಿಫಲರಾದರು.

ಮಾರಕ ಬೌಲಿಂಗ್​ ದಾಳಿ ನಡೆಸಿದ ಮಾರ್ಕ್​ ಅದಿರ್​ 4, ಟಿಮ್​ ಮರ್ಟ್ಯಾಗ್​ 2, ರಂಕಿನ್​ 3 ಹಾಗೂ ಕೆವಿನ್​ ಒ ಬ್ರಿಯಾನ್​ ಒಂದು ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ವಿಶ್ವಕಪ್​ನಲ್ಲಿ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಶಾಕ್​ ನೀಡುವ ಹಂಬಲದಲ್ಲಿದ್ದ ಅಫ್ಘಾನಿಸ್ತಾನ ತಂಡಕ್ಕೆ ಐರ್ಲೆಂಡ್​ ತಂಡ 72 ರನ್​ಗಳಿಂದ ಮಣಿಸಿ ವಿಶ್ವಕಪ್​ಗೂ ಮುನ್ನ ಅಫ್ಘಾನ್​ ತಂಡದ ಆತ್ಮವಿಶ್ವಾಸಕ್ಕೆ ದಕ್ಕೆ ಉಂಟುಮಾಡಿದೆ. ಎರಡನೇ ಹಾಗೂ ಕೊನೆಯ ಪಂದ್ಯ ನಾಳೆ ಇದೇ ಕ್ರೀಡಾಂಗಣದಲ್ಲಿ ನಡೆದಯಲಿದೆ.

ABOUT THE AUTHOR

...view details