ಕರ್ನಾಟಕ

karnataka

ETV Bharat / briefs

ಟಾಸ್​ ಗೆದ್ದ ಹೈದರಾಬಾದ್​ ಬೌಲಿಂಗ್​ ಆಯ್ಕೆ... ಬಲಿಷ್ಠ ಸನ್​​ರೈಸರ್ಸ್​ಗೆ​ ಶಾಕ್​ ನೀಡಲಿದೆಯೇ ರೋಹಿತ್​ ಪಡೆ - ಸನ್​ರೈಸರ್ಸ್​ ಹೈದರಾಬಾದ್​

ಮೂರು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಹಾಗೂ ಒಮ್ಮೆ ಚಾಂಪಿಯನ್​ ಆಗಿರುವ ಸನ್​ರೈಸರ್ಸ್ ಹೈದರಾಬಾದ್​ ತಂಡಗಳು ಇಂದು ಹೈದರಾಬಾದ್​ನಲ್ಲಿ ಮುಖಾಮುಖಿಯಾಗುತ್ತಿವೆ.

IPL2019

By

Published : Apr 6, 2019, 7:51 PM IST

ಹೈದರಾಬಾದ್​: ಐಪಿಎಲ್​ನ ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಇಂದು ಹೈದರಾಬಾದ್​ನಲ್ಲಿ ಮುಖಾಮುಖಿಯಾಗುತ್ತಿವೆ.

ಮೂರು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಹಾಗೂ ಒಮ್ಮೆ ಚಾಂಪಿಯನ್​ ಆಗಿರುವ ಸನ್​ರೈಸರ್ಸ್ ಹೈದರಾಬಾದ್​ ನಡುವೆ ಇಂದು ಕಠಿಣ ಸ್ಪರ್ಧೆ ಏರ್ಪಡಲಿದೆ.

ಆಡಿರುವ 4 ಪಂದ್ಯಗಳಲ್ಲಿ 3 ಪಂದ್ಯ ಗೆದ್ದು ಕೇವಲ ಒಂದು ಪಂದ್ಯ ಮಾತ್ರ ಸೋತಿರುವ ಸನ್​ರೈಸರ್ಸ್​ ಇಂದು ಮುಂಬೈ ವಿರದ್ಧವು ತವರಿನ ಲಾಭ ಪಡೆದು ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.

ಮತ್ತೊಂದು ಕಡೆ ತನ್ನ ಕೊನೆಯ ಪಂದ್ಯಲ್ಲಿ ಸೋಲಿಲ್ಲದ ಸರದಾರನಾಗಿದ್ದ ಧೋನಿ ಪಡೆಯನ್ನು ಮಣಿಸಿರುವ ಆತ್ಮ ವಿಶ್ವಾಸದಲ್ಲಿರುವ ಮುಂಬೈ ಇಂಡಿಯನ್ಸ್​ ರೈಸರ್ಸ್​ಗೆ ಶಾಕ್​ ನೀಡಿ ಪ್ಲೆ ಆಫ್​ ದಾರಿ ಸುಗಮ ಮಾಡಿಕೊಳ್ಳುವ ಆಲೋಚನೆಯಲ್ಲಿದೆ.

ಮುಖಾಮುಖಿ:

ಮುಂಬೈ ಹಾಗೂ ಹೈದರಾಬಾದ್​ ಒಟ್ಟು 12 ಪಂದ್ಯಗಳಲ್ಲಿ ಮುಖಾಮುಖಿಯಾಗುದ್ದು, ಎಸ್​ಆರ್​ಹೆಚ್​ 7 ಹಾಗೂ ಮುಂಬೈ 5ರಲ್ಲಿ ಗೆಲುವು ಸಾಧಿಸಿದೆ.

ಹೈದರಾಬಾದ್​ನಲ್ಲಿ ನಡೆದಿರುವ 6 ಪಂದ್ಯಗಳಲ್ಲಿ ಎಸ್​ಆರ್​ಹೆಚ್​ 4ರಲ್ಲಿ, ಮುಂಬೈ 2 ರಲ್ಲಿ ಗೆಲುವು ಸಾಧಿಸಿದೆ.

ಸನ್​ರೈಸರ್ಸ್​ ಹೈದರಾಬಾದ್:

ಜಾನಿ ಬ್ಯಾರ್ಸ್ಟೋವ್​, ಡೇವಿಡ್​ ವಾರ್ನರ್​,ಕೇನ್​ ವಿಲಿಯಮ್ಸನ್/​ ಮಾರ್ಟಿನ್​ ಗಫ್ಲಿಲ್​, ವಿಜಯ್​ ಶಂಕರ್​, ಮನೀಷ್​ ಪಾಂಡೆ, ಯೂಸಫ್​ ಪಠಾಣ್​, ಶಕಿಭ್​ ಹಲ್​ ಹಸನ್​/ಮಹಮ್ಮದ್​ ನಭಿ, ಭುವನೇಶ್ವರ್​ ಕುಮಾರ್​, ರಶೀದ್​ ಖಾನ್​, ಸಿದ್ದಾರ್ಥ್​​ ಕೌಲ್, ಸಂದೀಪ್​ ಶರ್ಮಾ

ಮುಂಬೈ ಇಂಡಿಯನ್ಸ್​:

ರೋಹಿತ್‌ ಶರ್ಮಾ (ನಾಯಕ), ಕ್ವಿಂಟನ್‌ ಡಿ ಕಾಕ್‌, ಸೂರ್ಯಕುಮಾರ್‌ ಯಾಧವ್​, ಯುವರಾಜ್‌ ಸಿಂಗ್​, ಕೀರನ್​ ಪೊಲ್ಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಮಿಚೆಲ್‌ ಮೆಕ್ಲನ್​ಘಾನ್‌, ಮಯಾಂಕ್​ ಮಾರ್ಕಂಡೆ​, ಬುಮ್ರಾ, ಜಾಸನ್​ ಬೆಹ್ರೆನ್​ಡ್ರಾಫ್​

ABOUT THE AUTHOR

...view details