ಮುಂಬೈ: ಕಳೆದೊಂದು ವರ್ಷದಿಂದ ವಿಶ್ವಕಪ್ ತಂಡವನ್ನು ತಯಾರು ಮಾಡುತ್ತಿರುವ ಬಿಸಿಸಿಐಗೆ ನಾಲ್ಕನೇ ಕ್ರಮಾಂಕದ ಆಯ್ಕೆ ಕಬ್ಬಿಣದ ಕಡಲೆಯಾಗಿದೆ. ಕಳೆದ ಐಪಿಎಲ್ನಲ್ಲಿ ರಾಯುಡು ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ಸೇರ್ಪಡೆಗೊಳಿಸಲಾಯಿತು. ಆದರೆ, ಅವರು ಸೀಮಿತ ಓವರ್ಗಳ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ತೋರದ ಹಿನ್ನೆಲೆಯಲ್ಲಿ ಮತ್ತೆ 4 ನೇ ಕ್ರಮಾಂಕಕ್ಕೆ ಐಪಿಎಲ್ ಪ್ರದರ್ಶನ ಪ್ರಮುಖವಾಗಲಿದೆ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.
ಮೊದಲು ರಾಹುಲ್,ರಾಯುಡು ಹಾಗೂ ಇದೀಗ ರಹಾನೆ ಹಾಗೂ ಶ್ರೇಯಸ್ ಅಯ್ಯರ್ ಕೂಡ 4 ನೇ ಕ್ರಮಾಂಕ್ಕೆ ತಾವೂ ಸಿದ್ಧ ಎಂದು ಅಖಾಡಕ್ಕೆ ಇಳಿದಿದ್ದಾರೆ. ಅಲ್ಲದೆ ಕೆಲವು ಹಿರಿಯ ಆಟಗಾರರು ಕೂಡ ಇವರಿಬ್ಬರಿಗೆ ಬೆಂಬಲ ನೀಡಿದ್ದಾರೆ. ರಾಹುಲ್ ಹಾಗೂ ರಾಯುಡು ಸ್ಥಿರ ಪ್ರದರ್ಶನದ ಕೊರತೆಯಿಂದ ಪರದಾಡುತ್ತಿದ್ದು, ಕಳೆದ ಆಸ್ಟ್ರೇಲಿಯಾ ಸರಣಿಯಲ್ಲಿ ರಾಯುಡು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ರಾಹುಲ್ ಸಿಕ್ಕ ಅವಕಾಶಗಳನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳಲಿಲ್ಲ.