ಹೈದರಾಬಾದ್: ವಿಶ್ವದ ಶ್ರೀಮಂತ ಹಾಗೂ ಮನರಂಜನಾ ಟೂರ್ನಿಯಾದ ಐಪಿಎಲ್ನ ಫೈನಲ್ ಪಂದ್ಯದ ಟಿಕೆಟ್ಸ್ ಕೇವಲ 120 ಸೆಕೆಂಡ್ಗಳಲ್ಲಿ ಮಾರಾಟವಾಗುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಫೈನಲ್ ಪಂದ್ಯ ನೋಡುವ ಆಸೆಯಲ್ಲಿದ್ದ ಅಭಿಮಾನಿಗಳು ಯಾವುದೇ ಮುನ್ಸೂಚನೆ ನೀಡದೆ ಟಿಕೆಟ್ ಮಾರಾಟ ಮಾಡಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ನಿನ್ನೆ ಮದ್ಯಾಹ್ನ 2 ಗಂಟೆಗೆ ಟಿಕೆಟ್ ಮಾರಾಟ ಸಂಸ್ಥೆ ಟಿಕೆಟ್ ಬಿಡುಗಡೆಗೊಳಿಸಿದೆ. 2.01ಕ್ಕೆ ಆನ್ಲೈನ್ನಲ್ಲಿ ಲಾಗ್ ಇನ್ ಆದ ಅಭಿಮಾನಿಗಳಿಗೆ ಟಿಕೆಟ್ ಸೋಲ್ಡ್ ಔಟ್ ಎಂದು ತೋರಿಸಿದೆ. ಎರಡೇ ನಿಮಿಷದಲ್ಲಿ ಎಲ್ಲಾ ಟಿಕೆಟ್ಗಳು ಮಾರಾಟವಾಗಿರುವುದನ್ನು ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.