ಬೆಂಗಳೂರು:ಕೊನೆಯ ಎರಡು ಸ್ಥಾನದಲ್ಲಿರುವ ಆರ್ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಪ್ಲೇಆಫ್ ರೇಸ್ನಲ್ಲಿರುವ ರಾಜಸ್ಥಾನಕ್ಕೆ ಈ ಪಂದ್ಯ ಮುಖ್ಯ. ಡೆಲ್ಲಿ ವಿರುದ್ಧ ಸೋತು ಪ್ಲೇಆಫ್ನಿಂದ ಹೊರಬಿದ್ದಿರುವ ಆರ್ಸಿಬಿಗೆ ಈ ಪಂದ್ಯ ಸೋತರೂ ಗೆದ್ದರೂ ಏನೂ ಆಗಬೇಕಿಲ್ಲ. ಆದರೆ, ಕೊನೆಯ ಸ್ಥಾನ ಹೊಂದಿದ ತಂಡ ಎಂಬ ಪಟ್ಟದಿಂದ ತಪ್ಪಿಸಿಕೊಳ್ಳಲು ಮಾತ್ರ ಈ ಪಂದ್ಯಗೆಲ್ಲಬೇಕಿದೆ.
12 ಪಂದ್ಯಗಳಿಂದ 10 ಅಂಕ ಪಡೆದಿರುವ ರಾಜಸ್ಥಾನ ತಂಡಕ್ಕೆ ಇಂದಿನದೂ ಸೇರಿ 2 ಪಂದ್ಯ ಬಾಕಿ ಉಳಿದಿವೆ. ಪ್ಲೇಆಫ್ಗೆ ಪ್ರವೇಶ ಪಡೆಯಲು ಎರಡೂ ಪಂದ್ಯಗಳನ್ನು ಉತ್ತಮ ರನ್ರೇಟ್ನಿಂದ ಗೆಲ್ಲಬೇಕಿದೆ. ರಾಜಸ್ಥಾನಕ್ಕೆ ಕೆಕೆಆರ್ (10), ಸನ್ರೈಸರ್ಸ್ (12), ಕಿಂಗ್ಸ್ ಇಲೆವೆನ್ ಪಂಜಾಬ್(10) ತಂಡಗಳು ಪೈಪೋಟಿ ನೀಡುತ್ತಿವೆ. ರಾಜಸ್ಥಾನಕ್ಕೆ ಈ ಪಂದ್ಯ ಗೆಲ್ಲುವುದಲ್ಲದೆ ರನ್ರೇಟ್ ಕೂಡ ಕಾಪಾಡಿಕೊಳ್ಳಬೇಕಿದೆ. ಆದರೆ, ಆರ್ಸಿಬಿ ವಿರುದ್ಧ ಹೆಚ್ಚಿನ ರನ್ರೇಟ್ನಿಂದ ಗೆಲುವು ಕಾಣುವುದು ನಿಜಕ್ಕೂ ಸವಾಲಿನ ವಿಚಾರವಾಗಿದೆ.
ಆರ್ಸಿಬಿ ಕಳೆದ ಬಾರಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ, ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ತಂಡ ಆರ್ಸಿಬಿ ಪ್ರಮುಖವಾಗಿದ್ದ ಪಂದ್ಯದಲ್ಲಿ 30 ರನ್ಗಳಿಂದ ಮಣಿಸಿ ಪ್ಲೇಆಫ್ ಕನಸಿಗೆ ಎಳ್ಳುನೀರು ಬಿಟ್ಟಿತ್ತು. ಇದೀಗ ಆರ್ಸಿಬಿ ರಾಜಸ್ಥಾನ ತಂಡದ ಪ್ಲೇಆಫ್ ಕನಸನ್ನು ನುಚ್ಚುನೂರು ಮಾಡಿ ಕಳೆದ ವರ್ಷದ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದ್ದು ಯಾವ ರೀತಿ ಪ್ರದರ್ಶನ ನೀಡಲಿದೆ ಎಂದು ಕಾದು ನೋಡಬೇಕಿದೆ.
ಮುಖಾಮುಖಿ: