ಚೆನ್ನೈ: ಐಪಿಎಲ್ನಲ್ಲಿ ಆಡಿರುವ ಎಲ್ಲಾ ಆವೃತ್ತಿಗಳಲ್ಲೂ ಚೆನ್ನೈ ತಂಡವನ್ನು ಪ್ಲೇ ಆಫ್ಗೆ ಕೊಂಡೊಯ್ದಿದ್ದೀರಾ, ನಿಮ್ಮ ಯಶಸ್ಸಿನ ಸೀಕ್ರೇಟ್ ಏನು ಎಂದು ಕೇಳಿದ ನಿರೂಪಕನಿಗೆ ಧೋನಿ ಕೊಟ್ಟ ಉತ್ತರ ತುಂಬಾ ತಮಾಷೆಯಾಗಿತ್ತು.
ನಿನ್ನೆ ಎಸ್ಆರ್ಹೆಚ್ ವಿರುದ್ಧ 7 ವಿಕೆಟ್ಗಳ ರೋಚಕ ಜಯ ಸಾಧಿಸಿದ ಬಳಿಕ ಪ್ರಶಸ್ತಿ ವಿತರಣಾ ಸಮಯದಲ್ಲಿ ನಿರೂಪಕ ಹರ್ಷ ಬೊಗ್ಲೆ ಧೋನಿಯನ್ನು 'ನಿಮ್ಮ ನಾಯಕತ್ವದಲ್ಲಿ ಆಡಿದ 10 ಆವೃತ್ತಿಗಳಲ್ಲೂ ಪ್ಲೆ ಆಫ್ಗೆ ಕೊಂಡೊಯ್ದಿದ್ದೀರಾ, ನಿಮ್ಮ ಗೆಲುವಿನ ಹಿಂದಿರುವ ಸೀಕ್ರೇಟ್ ಏನು ಎಂದು ಕೇಳಿದ್ದಾರೆ.
ಇದಕ್ಕೆ ನಗುತ್ತಲೇ ಉತ್ತರಿಸಿದ ಧೋನಿ "ಇವಾಗೇನಾದರೂ ನಾನು ಆ ಸೀಕ್ರೇಟ್ ಹೇಳಿದರೆ, ಮುಂದಿನ ಹರಾಜಿನಲ್ಲಿ ನನ್ನನ್ನು ಯಾವ ಪ್ರಾಂಚೈಸಿಯೂ ಕೊಂಡುಕೊಳ್ಳುವುದಿಲ್ಲ. ಹಾಗಾಗಿ ಆ ಟ್ರೇಡ್ ಸೀಕ್ರೇಟ್ ಹಾಗೆಯೇ ಉಳಿದುಕೊಳ್ಳಲಿ" ಎಂದು ನಗೆ ಚಟಾಕಿ ಹಾರಿಸಿದರು.
ನಂತರ ಆ ಪ್ರಶ್ನೆಗೆ ಉತ್ತರಿಸಿ, "ನಮ್ಮ ತಂಡದ ಯಶಸ್ಸಿಗೆ ತಂಡದ ಎಲ್ಲಾ ಆಟಗಾರರ ಸಂಪೂರ್ಣ ಶ್ರಮವೇ ಕಾರಣ. ಜೊತೆಗೆ ತೆರೆ ಹಿಂದಿರುವ ಕೋಚ್, ಸಪೋರ್ಟಿಂಗ್ ಸ್ಟಾಫ್ಗಳ ಪಾತ್ರ ತುಂಬಾ ಇದೆ. ಜೊತೆಗೆ ಪ್ರತಿ ಪಂದ್ಯದಲ್ಲೂ ಸೇರುವ ಜನಸಮೂಹದ ಬೆಂಬಲವೂ ಕಾರಣ" ಎಂದ ಮಿಸ್ಟ್ರ್ ಕೂಲ್, "ನಾನು ಕ್ರಿಕೆಟ್ನಿಂದ ನಿವೃತ್ತಿಯಾಗುವವರೆಗು ನನ್ನ ಯೋಜನೆಗಳನ್ನು ಬಹಿರಂಗಪಡಿಸುವುದಿಲ್ಲ" ಎಂದು ತಿಳಿಸಿದ್ದಾರೆ.
ಧೋನಿ ನಾಯಕತ್ವದಲ್ಲಿ ಸಿಎಸ್ಕೆ 10 ಬಾರಿ ಪ್ಲೇ ಆಫ್ ತಲುಪಿದ್ದು, 3 ಬಾರಿ ಚಾಂಪಿಯನ್, 4 ಬಾರಿ ರನ್ನರ್ ಆಪ್, ಹಾಗೂ ಒಮ್ಮೆ 3 ಮತ್ತು ಮತ್ತೊಮ್ಮೆ 4ನೇ ಸ್ಥಾನ ಪಡೆದಿದೆ. ಈ ಬಾರಿ ಕೂಡ ಪ್ಲೇ ಆಫ್ ತಲುಪಿದ್ದು, ಚಾಂಪಿಯನ್ ಆಗುವ ರೇಸ್ನಲ್ಲಿ ಮೊದಲ ಸ್ಥಾನದಲ್ಲಿದೆ.