ಕರ್ನಾಟಕ

karnataka

ETV Bharat / briefs

ಲೀಗ್ ಹಂತ ಮುಕ್ತಾಯ: ಗೆದ್ದು ಅಗ್ರಸ್ಥಾನಕ್ಕೇರಿದ ಮುಂಬೈ.... ಸೋತು ಹೊರಬಿದ್ದ ಕೆಕೆಆರ್​

ಈ ಸೋಲಿನೊಂದಿಗೆ ಕೆಕೆಆರ್​ ಈ ಅವೃತ್ತಿಯಲ್ಲಿ ತನ್ನ ಅಭಿಯಾನ ಕೊನೆಗೊಳಿಸಿದೆ. ಕೇವಲ ಹನ್ನೆರಡು ಅಂಕದೊಂದಿಗೆ ಸನ್​ರೈಸರ್ಸ್​ ಹೈದರಾಬಾದ್ ಪ್ಲೇ ಆಫ್​ಗೆ ಲಗ್ಗೆ ಇಟ್ಟಿದೆ. ಇಂದಿನ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಮುಂಬೈ

By

Published : May 5, 2019, 11:53 PM IST

ಮುಂಬೈ:ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್​ ಅನ್ನು ಒಂಭತ್ತು ವಿಕೆಟ್​ಗಳಿಂದ ಮಣಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದಿದ್ದ ಕೆಕೆಆರ್​ ನಿಗದಿತ 20 ಓವರ್​ನಲ್ಲಿ ಏಳು ವಿಕೆಟ್ ನಷ್ಟಕೆ 133 ರನ್​ಗಳ ಸಾಧಾರಣ ಮೊತ್ತವನ್ನು ದಾಖಲಿಸಿತು. ಕ್ರಿಸ್ ಲಿನ್(41) ಹಾಗೂ ರಾಬಿನ್ ಉತ್ತಪ್ಪ(40) ರನ್​ಗಳ ಹೊರತಾಗಿ ಉಳಿದವರಿಂದ ಉತ್ತಮ ಕೊಡುಗೆ ಬರಲಿಲ್ಲ.

ಮುಂಬೈ ಪರ ಲಸಿತ್ ಮಲಿಂಗಾ ಮೂರು ವಿಕೆಟ್ ಕಿತ್ತರೆ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಹಂಚಿಕೊಂಡರು.

134 ರನ್​ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಮುಂಬೈಗೆ ನಾಯಕ ರೋಹಿತ್ ಶರ್ಮ ಹಾಗೂ ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ನೀಡಿದರು.

ಡಿಕಾಕ್ 30 ರನ್ ಗಳಿಸಿ ಔಟಾದರೆ ನಂತರ ಬಂದ ಸೂರ್ಯಕುಮಾರ್ ಯಾದವ್ ವೇಗದ 46 ರನ್ ಗಳಿಸಿ ಅಜೇಯರಾಗುಳಿದರು. ನಾಯಕ ರೋಹಿತ್ ಶರ್ಮ ಜವಾಬ್ದಾರಿಯುತ 55 ರನ್ ಸಿಡಿಸಿ ಔಟಾಗದೆ ಉಳಿದರು.

ಈ ಸೋಲಿನೊಂದಿಗೆ ಕೆಕೆಆರ್​ ಈ ಅವೃತ್ತಿಯಲ್ಲಿ ತನ್ನ ಅಭಿಯಾನ ಕೊನೆಗೊಳಿಸಿದೆ. ಕೇವಲ ಹನ್ನೆರಡು ಅಂಕದೊಂದಿಗೆ ಸನ್​ರೈಸರ್ಸ್​ ಹೈದರಾಬಾದ್ ಪ್ಲೇ ಆಫ್​ಗೆ ಲಗ್ಗೆ ಇಟ್ಟಿದೆ. ಇಂದಿನ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಪ್ಲೇ ಆಫ್​ ವೇಳಾಪಟ್ಟಿ ಹೀಗಿದೆ:

ಚೆನ್ನೈನಲ್ಲಿ ಮೇ 7ರಂದು ಮೊದಲ ಕ್ವಾಲಿಫೈಯರ್ ನಡೆಯಲಿದ್ದು, ಮುಂಬೈ ಹಾಗೂ ಚೆನ್ನೈ ಮುಖಾಮುಖಿಯಾಗಲಿವೆ. ಮೇ 8ರಂದು ನಡೆಯಲಿರುವ ಎಲಿಮಿನೇಟರ್​​ನಲ್ಲಿ ಡೆಲ್ಲಿ ಹಾಗೂ ಹೈದರಾಬಾದ್ ಸೆಣಸಾಡಲಿವೆ.

ಮೊದಲ ಕ್ವಾಲಿಫೈಯರ್​​ನಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್​​ನಲ್ಲಿ ಗೆದ್ದ ತಂಡಗಳು ಮೇ 10ರಂದು ನಡೆಯಲಿರುವ ಎರಡನೇ ಕ್ವಾಲಿಪೈಯರ್​​ನಲ್ಲಿ ಎದುರಾಗಲಿವೆ.

ಮೇ 12ರಂದು ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಮೈದಾನದಲ್ಲಿ ಐಪಿಎಲ್​​ನ 12ನೇ ಆವೃತ್ತಿಯ ಉಪಾಂತ್ಯ ಪಂದ್ಯ ನಡೆಯಲಿದೆ.

ABOUT THE AUTHOR

...view details