ಮೊಹಾಲಿ:ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಆತಿಥೇಯ ಪಂಜಾಬ್ ತಂಡ ಆರು ವಿಕೆಟ್ಗಳ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಸಿಎಸ್ಕೆ ಆರಂಭಿಕ ಆಟಗಾರ ಫಫ್ ಡು ಪ್ಲೆಸಿಸ್ ಅಬ್ಬರದ 96(55) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಸುರೇಶ್ ರೈನಾ 53(38) ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 170 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.
171 ರನ್ಗಳ ಗುರಿ ಬೆನ್ನತ್ತಿದ ಪಂಜಾಬ್ ತಂಡಕ್ಕೆ ಕನ್ನಡಿಗ ಕೆ.ಎಲ್.ರಾಹುಲ್ ಉತ್ತಮ ಆರಂಭ ನೀಡಿದರು. 36 ಎಸೆತದಲ್ಲಿ ಆಕರ್ಷಕ 71 ರನ್ ಬಾರಿಸಿದ ರಾಹುಲ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ನಂತರದಲ್ಲಿ ನಿಕೋಲಸ್ ಪೂರನ್ 36 ರನ್ಗಳ ಸಹಾಯದಿಂದ ಇನ್ನೂ ಎರಡು ಓವರ್ ಇರುವಂತೆ ಪಂಜಾಬ್ ತಂಡ ಗೆಲುವಿನ ದಡ ಮುಟ್ಟಿತು.
ಚೆನ್ನೈ ಇಂದಿನ ಪಂದ್ಯ ಸೋತಿದ್ದರೂ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲೇ ಲೀಗ್ ಕೊನೆಗೊಳಿಸಲಿದೆ.