ಹೈದರಾಬಾದ್: 12 ಐಪಿಎಲ್ಗಳ ಇತಿಹಾಸದಲ್ಲಿ ಕೇವಲ 12 ಅಂಕಗಳೊಂದಿಗೆ ಪ್ಲೇ ಆಫ್ ತಲುಪಿರುವ ಹೈದರಾಬಾದ್ ತಂಡದ ಯಶಸ್ಸಿನ ಹಿಂದೆ ಇಬ್ಬರು ವಿದೇಶಿ ಆಟಗಾರರ ಪರಿಶ್ರಮವಿದೆ.
ಆರ್ಸಿಬಿ ವಿರುದ್ಧ ತನ್ನ ಕೊನೆಯ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ನೇರವಾಗಿ ಪ್ಲೇ ಆಫ್ ತಲುಪುವ ಅವಕಾಶ ತಪ್ಪಿಸಿಕೊಂಡ ಹೈದರಾಬಾದ್ ಕೊನೆಯ ಪಂದ್ಯದಲ್ಲಿ ಮುಂಬೈ ಹಾಗೂ ಕೆಕೆಆರ್ ವಿರುದ್ಧದ ಫಲಿತಾಂಶಕ್ಕಾಗಿ ಕಾಯಬೇಕಾಯಿತು. ಕೊನೆಗೆ ಕೆಕೆಆರ್ ಸೋಲಿನೊಂದಿಗೆ ಸನ್ರೈಸರ್ಸ್, ರನ್ರೇಟ್ ಆಧಾರದ ಮೇಲೆ ಪ್ಲೇ ಆಫ್ಗೇರಿದ ಸಾಧನೆ ಮಾಡಿತು. ಆದರೆ, ಎಸ್ಆರ್ಹೆಚ್ ಪ್ಲೇ ಆಫ್ ತಲುಪಲು ವಾರ್ನರ್-ಬೈರ್ಸ್ಟೋವ್ ಆಟಗಾರರು ಕಾರಣ ಎಂಬುದನ್ನು ಮರೆಯುವಂತಿಲ್ಲ.
2019ರ ಆವೃತ್ತಿಯಲ್ಲಿ ಯಶಸ್ವೀ ಆರಂಭಿಕ ಜೋಡಿಯಾಗಿದ್ದ ವಾರ್ನರ್ 12 ಪಂದ್ಯಗಳಲ್ಲಿ 692 ರನ್ ಗಳಿಸಿದ್ದಾರೆ. 1 ಶತಕ ಹಾಗೂ 8 ಅರ್ಧಶತಕ ಅವರ ಖಾತೆಯಲ್ಲಿದೆ. ಇನ್ನು, ಬೈರ್ಸ್ಟೋವ್ 10 ಪಂದ್ಯಗಳಲ್ಲಿ ಒಂದು ಶತಕ ಹಾಗೂ 2 ಅರ್ಧಶತಕ ಸೇರಿದಂತೆ 445 ರನ್ ದಾಖಲಿಸಿದ್ದಾರೆ.
ವಾರ್ನರ್ -ಬೈರ್ಸ್ಟೋವ್ ಪ್ರದರ್ಶನದ ಹೀಗಿದೆ:
ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಮೊದಲು ಬ್ಯಾಟಿಂಗ್, 9.3 ಓವರ್ಗಳಲ್ಲಿ 118 ರನ್ಗಳ ಜೊತೆಯಾಟ, ವಾರ್ನರ್ 85, ಬೈರ್ಸ್ಟೋವ್ 39 ರನ್