ಕರ್ನಾಟಕ

karnataka

ETV Bharat / briefs

ಅಂಪೈರ್​ ಮಾಡಿದ ಪ್ರಮಾದ... ಆರ್​ಸಿಬಿಗೆ ಸಿಗಬೇಕಿದ್ದ 'ಲಕ್ಕಿ ಚಾನ್ಸ್'​ ಹೈದರಾಬಾದ್​ ತೆಕ್ಕೆಗೆ! - Mumbai Indians

ಐಪಿಎಲ್​ನ ಮುಂಬೈ ಹಾಗೂ ಬೆಂಗಳೂರು ನಡುವಿನ ಮೊದಲ ಪಂದ್ಯದಲ್ಲಿ ಆರ್​ಸಿಬಿ 6 ರನ್​ಗಳಿಂದ ಸೋಲನುಭವಿಸಿತ್ತು. ಆದರೆ, ಪಂದ್ಯದ ಕೊನೆಯ ಎಸೆತದಲ್ಲಿ ಆರ್​ಸಿಬಿಗೆ 7 ರನ್​ಗಳ ಅವಶ್ಯಕತೆಯಿತ್ತು. ಮಲಿಂಗಾ ಎಸೆದ  ಕೊನೆಯ ಎಸೆತ ನೋಬಾಲ್​ ಆಗಿದ್ದರೂ ಅಂಪೈರ್​ ಅದನ್ನು ಗಮನಿಸಿದೇ ಇದ್ದುದ್ದರಿಂದ ಆರ್​ಸಿಬಿ ಇರಬೇಕಾದ ಜಾಗದಲ್ಲಿ ಇಂದು ಸನ್​ರೈಸರ್ಸ್​ ಹೈದರಾಬಾದ್​ ಆಡುವಂತಾಗಿದೆ.

mi

By

Published : May 6, 2019, 7:28 PM IST

ಬೆಂಗಳೂರು:ಕೇವಲ 12 ಅಂಕಗಳೊಂದಿಗೆ ಪ್ಲೇ ಆಫ್​ ಪ್ರವೇಶಿಸಿರುವ ಹೈದರಾಬಾದ್​​ ಇತಿಹಾಸ ಸೃಷ್ಟಿಸಿದರೆ, ಇತ್ತ ಆರ್​ಸಿಬಿಗೆ 7ನೇ ಪಂದ್ಯದಲ್ಲಿ ಅಂಪೈರ್ ಮಾಡಿದ​ ಎಡವಟ್ಟಿನಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲವಾದಂತಾಗಿದೆ.

ಹೌದು, ಐಪಿಎಲ್​ನ ಮುಂಬೈ ಹಾಗೂ ಬೆಂಗಳೂರು ನಡುವಿನ ಮೊದಲ ಪಂದ್ಯದಲ್ಲಿ ಆರ್​ಸಿಬಿ 6 ರನ್​ಗಳಿಂದ ಸೋಲನುಭವಿಸಿತ್ತು. ಆದರೆ, ಪಂದ್ಯದ ಕೊನೆಯ ಎಸೆತದಲ್ಲಿ ಆರ್​ಸಿಬಿಗೆ 7 ರನ್​ಗಳ ಅವಶ್ಯಕತೆಯಿತ್ತು. ಮಲಿಂಗಾ ಎಸೆದ ಕೊನೆಯ ಎಸೆತ ನೋಬಾಲ್​ ಆಗಿದ್ದರೂ ಅಂಪೈರ್​ ಅದನ್ನು ಗಮನಿಸಿದೇ ಇದ್ದುದ್ದರಿಂದ ಆರ್​ಸಿಬಿ ಇರಬೇಕಾದ ಜಾಗದಲ್ಲಿ ಇಂದು ಸನ್​ರೈಸರ್ಸ್​ ಹೈದರಾಬಾದ್​ ಆಡುವಂತಾಗಿದೆ.

12ನೇ ಆವೃತ್ತಿಯ 7 ನೇ ಪಂದ್ಯದಲ್ಲಿ 188 ರನ್​ಗಳನ್ನು ಬೆನ್ನೆತ್ತಿದ ಆರ್​ಸಿಬಿ ಗೆಲುವು ಸಾಧಿಸಲು ಕೊನೆಯ ಎಸೆತದಲ್ಲಿ 7 ರನ್​ಗಳಿಸಬೇಕಿತ್ತು. ಆದರೆ ಸ್ಟೈಕ್​ನಲ್ಲಿದ್ದ ಶಿವಂದುಬೆ ಚಂಡನ್ನು ಲಾಂಗ್​ ಆನ್​ಗೆ ಬಾರಿಸಿದರು . ಆ ಬಾಲ್​ ಫೀಲ್ಡರ್​ ಕೈಸೇರಿದ್ದರಿಂದ ಶಿವಂ ದುಬೆ ರನ್​ ತೆಗೆದುಕೊಳ್ಳಲು ಮುಂದಾಗಲಿಲ್ಲ. ಮುಂಬೈ ವಿಜಯಿ ಎಂದು ಘೋಷಿಸಿದ ನಂತರ ರಿಪ್ಲೇಯಲ್ಲಿ ಮಲಿಂಗಾ ನೋಬಾಲ್​ ಎಸೆದಿದ್ದು ಖಚಿತವಾಗಿತ್ತು. ಆದರೆ, ಅಂಪೈರ್​ ಬೌಲರ್ ​ಅನ್ನು ಗಮನಿಸದಿದ್ದರಿಂದ ಅಂದಿನ ಪಂದ್ಯ ಮುಂಬೈ ಪಾಲಾಗಿತ್ತು.

ಇನ್ನು ಅಂದು ಅಂಪೈರ್​ ನೋಬಾಲ್​ ನೀಡಿದ್ದರೆ ಕೊನೆಯ ಎಸೆತದಲ್ಲಿ ಫ್ರೀ ಹಿಟ್​ ಉಪಯೋಗಿಸಿಕೊಂಡು ಕ್ರೀಸ್​ನಲ್ಲಿ ಎಬಿ ಡಿ ವಿಲಿಯರ್ಸ್ ಅಗತ್ಯವಿದ್ದ 5 ರನ್​ಗಳಲ್ಲಿ ಒಂದು ಬೌಂಡರಿ ಅಥವಾ ಸಿಕ್ಸರ್​ ಬಾರಿಸಿ ಪಂದ್ಯವನ್ನು ಆರ್​ಸಿಬಿ ಪರ ಮಾಡುತ್ತಿದ್ದರು. ಅಂದು ಅಂಪೈರ್ ಮಾಡಿದ ಪ್ರಮಾದ ಅಷ್ಟು ಪರಿಣಾಮ ಬೀರದಿದ್ದರೂ ಇಂದು ಹೈದರಾಬಾದ್​ ಕೇವಲ ಆರ್​ಸಿಬಿಗಿಂತ 1 ಅಂಕ ಹೆಚ್ಚಿಗೆ ಪಡೆದು ಪ್ಲೇ ಆಫ್​ ತಲುಪಿರುವುದು ನಿಜಕ್ಕೂ ಆರ್​ಸಿಬಿ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದ್ದು ಅಂಪೈರ್​ ವಿರುದ್ದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

ABOUT THE AUTHOR

...view details