ಚೆನ್ನೈ:ಈ ಆವೃತ್ತಿಯ ಐಪಿಎಲ್ನ ಲೀಗ್ ಹಂತ ಮುಕ್ತಾಯವಾಗಿ ಇಂದು ಮೊದಲ ಕ್ವಾಲಿಫೈಯರ್ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿದ್ದು ಟಾಸ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದೆ.
ಚೆನ್ನೈ ಹಾಗೂ ಮುಂಬೈ ತಲಾ ಒಂದೊಂದು ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯುತ್ತಿವೆ. ಗಾಯಗೊಂಡಿರುವ ಕೇದಾರ್ ಜಾಧವ್ ಬದಲಿಗೆ ಮುರಳಿ ವಿಜಯ್ ಆಡುತ್ತಿದ್ದರೆ ಅತ್ತ ಮುಂಬೈನಲ್ಲಿ ಮೆಕ್ಲನಗನ್ ಸ್ಥಾನದಲ್ಲಿ ಜಯಂತ್ ಯಾದವ್ ಕಾಣಿಸಿಕೊಳ್ಳುತ್ತಿದ್ದಾರೆ.
ಇಂದಿನ ಪಂದ್ಯ ಗೆದ್ದವರು ನೇರವಾಗಿ ಫೈನಲ್ಗೆ ಅರ್ಹತೆ ಪಡೆಯಲಿದ್ದಾರೆ. ಸೋತ ತಂಡ ಎಲಿಮಿನೇಟರ್ನಲ್ಲಿ ಗೆದ್ದ ತಂಡದ ಜೊತೆಗೆ ಎರಡನೇ ಕ್ವಾಲಿಫೈಯರ್ ಆಡಲಿದೆ.