ನವದೆಹಲಿ:ಇಂಟರ್ನೆಟ್ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಭಾರತ ದೇಶದಲ್ಲಿ 4G ವೇಗ ಕುಸಿತವಾಗಿದೆ ಎಂದು ವರದಿ ತಿಳಿಸಿದೆ.
ಓಕ್ಲಾ(Ookla) ಎನ್ನುವ ಸಂಸ್ಥೆ ಮೊಬೈಲ್ ನೆಟ್ವರ್ಕ್ ವೇಗದ ಕುರಿತಂತೆ ಪರೀಕ್ಷೆ ನಡೆಸಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈ ವರ್ಷ ಇಂಟರ್ನೆಟ್ ವೇಗ ಕುಸಿತವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2018ರಲ್ಲಿ ಮೊಬೈಲ್ ಇಂಟರ್ನೆಟ್ ವೇಗದ ವಿಚಾರದಲ್ಲಿ 109ನೇ ಸ್ಥಾನದಲ್ಲಿದ್ದ ಭಾರತ, ಈ ವರ್ಷ 121ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಸ್ಥಿರ ಬ್ರಾಡ್ಬ್ಯಾಂಡ್ ವೇಗದಲ್ಲಿ 67ರಿಂದ 68ನೇ ಸ್ಥಾನಕ್ಕೆ ಭಾರತ ತಳ್ಳಲ್ಪಟ್ಟಿದೆ.
ಓಕ್ಲಾ ಸಂಸ್ಥೆ ಇಂಟರ್ನೆಟ್ ವೇಗಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳು ಸ್ಪೀಡ್ ಟೆಸ್ಟ್ ನಡೆಸುತ್ತದೆ.