ಪಾಲಕ್ಕಾಡ್(ಕೇರಳ):ಶ್ರೀಲಂಕಾ ಮಾದರಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ ಯೋಜನೆ ರೂಪಿಸಿದ್ದ ಪಾಲಕ್ಕಾಡ್ ಮೂಲದ 29 ವರ್ಷದ ವ್ಯಕ್ತಿಯೋರ್ವನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.
ಬಂಧಿತನನ್ನು ರಿಯಾಸ್ ಎ ಅಲಿಯಾಸ್ ರಿಯಾಸ್ ಅಬೂಬಕ್ಕರ್ ಅಲಿಯಾಸ್ ಅಬು ದುಜಾನ ಎಂದು ಗುರುತಿಸಲಾಗಿದೆ.

ಶ್ರೀಲಂಕಾ ಉಗ್ರದಾಳಿಯ ಮಾಸ್ಟರ್ಮೈಂಡ್ ಜಹ್ರಾನ್ ಹಶಿಮ್ನಿಂದ ಈತ ಪ್ರೇರಿತನಾಗಿದ್ದು ಅದೇ ಮಾದರಿಯಲ್ಲಿ ಕೇರಳದಲ್ಲಿ ಆತ್ಮಾಹುತಿ ದಾಳಿ ಯೋಜಿಸಿದ್ದ ಎಂದು ವಿಚಾರಣೆ ವೇಳೆ ಆತ ಹೇಳಿಕೊಂಡಿದ್ದಾನೆ.
ಕಳೆದೊಂದು ವರ್ಷದಿಂದ ಜಹ್ರಾನ್ ಹಶಿಮ್ನ ವಿಡಿಯೋಗಳನ್ನು ನೋಡುತ್ತಾ ಆತನ ಮಾತುಗಳಿಂದ ಸಾಕಷ್ಟು ಪ್ರಭಾವಿತನಾಗಿದ್ದ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ತನಿಖಾ ದಳ ಭಾನುವಾರದಂದು ಕೇರಳದಲ್ಲಿ ಶಂಕಿತರ ಮನೆಗೆ ದಾಳಿ ನಡೆಸಿ ಶೋಧ ನಡೆಸಿದೆ. ಇವರೆಲ್ಲರು ಐಸಿಸ್ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಗುಮಾನಿ ಮೇಲೆ ದಾಳಿ ನಡೆಸಲಾಗಿದೆ.