ಲಿಂಗಸುಗೂರು: ರೈತರಿಂದಲೇ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆ ಸಮೀಕ್ಷೆ ಮಾಡಿಕೊಳ್ಳುವ ಜಾಗೃತಿ ಅಭಿಯಾನಕ್ಕೆ ತಾಲೂಕಿಲ್ಲಿ ಚಾಲನೆ ನೀಡಲಾಯಿತು.
ಲಿಂಗಸುಗೂರು: ಬೆಳೆ ಸಮೀಕ್ಷೆ ಉತ್ಸವಕ್ಕೆ ಚಾಲನೆ - Lingasuguru latest news
ರಾಯಚೂರು ಜಿಲ್ಲೆಯ ಲಿಂಗಸುಗೂರಲ್ಲಿ ಬೆಳೆ ಸಮೀಕ್ಷೆ ಉತ್ಸವ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಲಿಂಗಸುಗೂರು
ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಫೋಟೋ ಮಾಹಿತಿಯನ್ನು ಖುದ್ದು ಅಥವಾ ಇತರರ ಸಹಕಾರದಿಂದ ಮೊಬೈಲ್ ಮೂಲಕ ಅಪ್ ಲೋಡ್ ಮಾಡಲು ಸದಾವಕಾಶ ನೀಡಲಾಗಿದೆ. ಇದನ್ನು ರೈತರು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಲು ಕರಪತ್ರ ವಿತರಿಸಲಾಗಿದೆ.
ಈ ವೇಳೆ ಶಾಸಕ ಡಿ.ಎಸ್. ಹೂಲಗೇರಿ ಮಾತನಾಡಿ, ರೈತರು ಗೂಗಲ್ ಪ್ಲೇಸ್ಟೋರ್‌ನಲ್ಲಿ ರೈತರ ಬೆಳೆ ಸಮೀಕ್ಷೆ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಬೆಳೆಗಳ ಕುರಿತಾದ ಮಾಹಿತಿಯನ್ನು ಆಗಸ್ಟ್ 24ರೊಳಗೆ ಹಾಕಬೇಕು. ಅಪ್‌ಲೋಡ್ ಮಾಡದಿದ್ದಲ್ಲಿ ಇಲಾಖೆಗಳಿಂದ ಸಿಗುವ ಸೌಲಭ್ಯ ಸಿಗುವುದಿಲ್ಲಎಂದರು.