ಕರ್ನಾಟಕ

karnataka

ETV Bharat / briefs

ಅಭ್ಯಾಸ ಪಂದ್ಯದಲ್ಲಿ ಪೆವಿಲಿಯನ್​ ಪರೇಡ್ ...  50ಕ್ಕೆ 4 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ - ವಿಶ್ವಕಪ್​

ಅಭ್ಯಾಸ ಪಂದ್ಯದಲ್ಲಿ ಟೀಮ್​ ಇಂಡಿಯಾ ಆರಂಭಿಕ ಆಘಾತ ಎದುರಿಸಿದ್ದು, ಕಿವೀಸ್​ ಬೌಲ್ಟ್​ ಬೌನ್ಸಿ ಪಿಚ್​ನಲ್ಲಿ ಮತ್ತೊಮ್ಮೆ ಭಾರತೀಯ ಬ್ಯಾಟ್ಸ್​ಮನ್​ಗಳನ್ನು ಕಾಡುತ್ತಿದ್ದಾರೆ.

ind

By

Published : May 25, 2019, 4:10 PM IST

ಲಂಡನ್​: ವಿಶ್ವಕಪ್​ಗೂ ಮುನ್ನ ನಡೆಯುತ್ತಿರುವ ನ್ಯೂಜಿಲ್ಯಾಂಡ್​ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಆರಂಭಲ್ಲೇ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದು, ಆರಂಭಿಕರಾದ ರೋಹಿತ್​,ಧವನ್, ಕೊಹ್ಲಿ​ ಹಾಗೂ ರಾಹುಲ್​ ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿದೆ.

ಟಾಸ್​ಗೆದ್ದು ಬ್ಯಾಟಿಂಗ್​ ಆರಂಭಿಸಿರುವ ಭಾರತ ತಂಡ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಕಿವೀಸ್​ ವಿರುದ್ಧ ಕಣಕ್ಕಿಳಿದಿದ್ದು, ರೋಹಿತ್​ 2, ಧವನ್​ 2,ರಾಹುಲ್​ 6 ರನ್​ಗಳಿಸಿ ಬೌಲ್ಟ್​ಗೆ ವಿಕೆಟ್​ ಒಪ್ಪಿಸಿದರೆ, ಕೊಹ್ಲಿ 18 ರನ್​ಗಳಿಸಿ ಗ್ರ್ಯಾಂಡ್​ಹೋಮ್​ಗೆ ವಿಕೆಟ್​ ಒಪ್ಪಿಸಿದರು.

ಹಾರ್ದಿಕ್​ ಪಾಂಡ್ಯ 14 ರನ್​ ಹಾಗೂ ಧೋನಿ 4 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

ತಂಡಗಳ ವಿವರ:

ಭಾರತ ತಂಡ:

ವಿರಾಟ್​ ಕೊಹ್ಲಿ,ರೋಹಿತ್​ ಶರ್ಮಾ, ಶಿಖರ್​ ಧವನ್​, ಎಂಎಸ್​ ಧೋನಿ, ದಿನೇಶ್​​ ಕಾರ್ತಿಕ್​, ಕೆಎಲ್​ ರಾಹುಲ್​, ರವೀಂದ್ರ ಜಡೇಜಾ, ಮೊಹಮ್ಮದ್​ ಶಮಿ, ಕುಲ್ದೀಪ್​ ಯಾದವ್​, ಜಸ್ಪ್ರೀತ್​ ಬುಮ್ರಾ, ಭುವನೇಶ್ವರ್​ ಕುಮಾರ್​,ಯಜುವೇಂದ್ರ ಚಹಲ್​, ಹಾರ್ದಿಕ್​ ಪಾಂಡ್ಯ

ನ್ಯೂಜಿಲ್ಯಾಂಡ್​:

ಕಾಲಿನ್​ ಮನ್ರೋ,ಮಾರ್ಟಿನ್​ ಗಪ್ಟಿಲ್​,ಕೇನ್​ ವಿಲಿಯಮ್ಸನ್(ನಾಯಕ)​,ಟಾಮ್​ ಬ್ಲಂಡೆಲ್​, ರಾಸ್​ ಟೇಲರ್​,ಕಾಲಿನ್​ ಡಿ ಗ್ರಾಂಡ್​ಹೋಮ್​,ಹೆನ್ರಿ ನಿಕೋಲ್ಸ್​,ಜೇಮ್ಸ್​​ ನಿಶಾಮ್​, ಮಿಚೆಲ್​ ಸ್ಯಾಂಟ್ನರ್​,ಲೂಕಿ ಫರ್ಗ್ಯುಶನ್​,ಟ್ರೆಂಟ್​ ಬೌಲ್ಟ್​,ಟಿಮ್​ ಸೌತಿ,ಇಶ್​ ಸೋಧಿ,

ABOUT THE AUTHOR

...view details