ಕರ್ನಾಟಕ

karnataka

ETV Bharat / briefs

ಬದುಕಿತು ಬಡ ಜೀವ... ಈ ಹಾವಿನ ಸ್ಥಿತಿ ಹೇಗಾಗಿತ್ತು ಗೊತ್ತಾ!? - ಇಂದೋರ್

ಶಾಲಾ ಆವರಣದಲ್ಲಿ ಸಿಬ್ಬಂದಿಯಿಂದ ಹೊಡೆತ ತಿಂದು ನರಳಾಡುತ್ತಿದ್ದ ಹಾವಿನ ಜೀವವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿ ಶೇರ್​ ಸಿಂಗ್​ ಎಂಬುವರು ಉಳಿಸಿದ್ದಾರೆ.

ಶೇರ್​ ಸಿಂಗ್

By

Published : Jun 2, 2019, 10:44 AM IST

ಇಂದೋರ್​​:ಇಲ್ಲಿನ ಶಾಲೆಯೊಂದರ ಬಳಿ ಜನರು ಕ್ರಿಮಿನಾಶಕ ಸುರಿದು ನಂತರ ಹೊಡೆದಿದ್ದ ಹಾವೊಂದನ್ನು ಪ್ರಾಣಿಪ್ರಿಯರೊಬ್ಬರು ರಕ್ಷಿಸಿದ್ದಾರೆ.

ಶಾಲಾ ಆವರಣದಲ್ಲಿ ಸಿಬ್ಬಂದಿಯಿಂದ ಹೊಡೆತ ತಿಂದು ನರಳಾಡುತ್ತಿದ್ದ ಹಾವಿನ ಜೀವವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿ ಶೇರ್​ ಸಿಂಗ್​ ಎಂಬುವರು ಉಳಿಸಿದ್ದಾರೆ. ಭಯದಿಂದ ಅಲ್ಲಿನ ಸಿಬ್ಬಂದಿ ಅದರ ಮೇಲೆ ಕ್ರಿಮಿನಾಶಕ ಸುರಿದಿದ್ದರು ಎನ್ನಲಾಗಿದೆ.

ಹಾವುಗಳ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಹಾವು ಅಸ್ವಸ್ಥವಾಗಿದೆ. ಹಾವು ಕಂಡ್ರೆ ಸಾಕು ಜನ ಅದನ್ನು ಹೊಡೆಯಲು ಮುಂದಾಗುವುದು ಈಗ ಸಾಮಾನ್ಯವಾಗಿಬಿಟ್ಟಿದೆ ಎಂದು ಸಿಂಗ್​ ಹೇಳಿದ್ದಾರೆ.

ಹಾವನ್ನು ರಕ್ಷಿಸಿದ ಶೇರ್​ ಸಿಂಗ್

ಇದು ಇಲಿ ತಿನ್ನುವ ಹಾವಾಗಿದ್ದು, ಅಷ್ಟು ವಿಷಕಾರಿಯೂ ಅಲ್ಲ. ಜನ ಅದಕ್ಕೆ ತೊಂದರೆ ಕೊಟ್ಟಾಗ ಮಾತ್ರ ಅದು ಕಚ್ಚಲು ಬರುತ್ತೆ. ಆದರೆ ಇದು ತುಂಬಾ ವೇಗವಾಗಿ ಓಡುವುದರಿಂದ ಜನ ಹೆದರಿಕೊಳ್ಳುತ್ತಾರೆ ಎನ್ನುತ್ತಾರೆ ಅವರು. ಇನ್ನು ಹಾವಿನ ಮೇಲೆ ಕ್ರಿಮಿನಾಶಕ ಸುರಿದಿದ್ದರಿಂದ ಅದು ಅದರ ದೇಹದ ಒಳಗೂ ಹೋಗಿದೆ. ಹಾಗಾಗಿ ಒಂದು ಸ್ಟ್ರಾ ಹಾವಿನ ಬಾಯಿಯೊಳಗೆ ಹಾಕಿ ಅದರ ಮೂಲಕ ನೀರು ಬಿಟ್ಟಿದ್ದಾರೆ. ಆ ಮೂಲಕ ಹಾವಿನ ಹೊಟ್ಟೆಯೊಳಗೆ ಸೇರಿರುವ ವಿಷವನ್ನು ಹೊರಕ್ಕೆ ತೆಗೆದಿದ್ದಾರೆ ಶೇರ್​ ಸಿಂಗ್​.

ಹೀಗೆ ಹೊಟ್ಟೆಯೊಳಗೆ ನೀರು ಬಿಟ್ಟು ಹಾವಿನ ಬಾಯಿಂದ ಒಂದಿಷ್ಟು ವಿಷ ಕಕ್ಕಿಸಿದ್ದಾರೆ. ಅದರಿಂದ ಕೊಂಚ ನಿರಾಳವಾದ ಹಾವು ಸಹಜ ಸ್ಥಿತಿ​ಗೆ ಬಂದಿದೆ. ಅಲ್ಲದೆ ಬಕೆಟ್​ವೊಂದರಲ್ಲಿ ಹಾಕಿ ಹಾವನ್ನು ತೊಳೆದು ಶುಚಿ ಮಾಡಿದ್ದಾರೆ. ಹೀಗೆ ಸಾಯುವ ಹಂತಕ್ಕೆ ತಲುಪಿದ್ದ ಹಾವನ್ನು ರಕ್ಷಿಸಿ ಶೇರ್​ ಸಿಂಗ್​ ಮಾನವೀಯತೆ ಮೆರೆದಿದ್ದಾರೆ.

ABOUT THE AUTHOR

...view details