ಕರ್ನಾಟಕ

karnataka

ETV Bharat / briefs

ಪ್ರೊ ಕಬ್ಬಡಿ ಲೀಗ್​ಗೆ ಸೆಡ್ಡು ಹೊಡೆಯಲು ಬಂತು ಇಂಡೋ- ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ - ಇಂಡೋ- ಇಂಟರ್‌ನ್ಯಾಷನಲ್‌

ಇದರಲ್ಲಿ ಒಟ್ಟು 160 ಪ್ಲೇಯರ್ಸ್​ ಭಾಗಿಯಾಗುತ್ತಿದ್ದಾರೆ. ಕರ್ನಾಟಕದ 13 ಕಬ್ಬಡಿ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.

ಪ್ರೊ ಕಬ್ಬಡಿ ಲೀಗ್​ಗೆ ಸೆಡ್ಡು ಹೊಡೆಯಲು ಬಂತು ಕಬಡ್ಡಿ ಲೀಗ್​​

By

Published : May 12, 2019, 3:32 AM IST

ಬೆಂಗಳೂರು:ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್ (ಐಐಪಿಕೆಎಲ್‌) ಮತ್ತು ಡಿ ಸ್ಪೋರ್ಟ್ಸ್​​ ಆಶ್ರಯದಲ್ಲಿ ಇದೇ ತಿಂಗಳ 13ರಿಂದ ಜೂನ್​ 4ರವರೆಗೆ ಕಬ್ಬಡ್ಡಿ ಕ್ರೀಡಾಕೂಟ ನಡೆಯಲಿದೆ.

ಪ್ರೊ ಕಬ್ಬಡಿ ಲೀಗ್​ಗೆ ಸೆಡ್ಡು ಹೊಡೆಯಲು ಬಂತು ಕಬಡ್ಡಿ ಲೀಗ್​​

ಮೇ 23ರವರೆಗೆ ಮೊದಲ ಲೆಗ್‌ನ ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ. ಎರಡನೇ ಲೆಗ್‌ ಪಂದ್ಯಗಳು ಮೈಸೂರಿ ನಲ್ಲಿ ಮೇ 24ರಿಂದ 29ರವರೆಗೆ ನಡೆಯಲಿವೆ. ಜೂನ್‌ 1ರಿಂದ 4ರವರೆಗೆ ಸೆಮಿಫೈನಲ್‌, ಫೈನಲ್‌ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿವೆ. ಇದರಲ್ಲಿ ಒಟ್ಟು 160 ಪ್ಲೇಯರ್ಸ್​ ಭಾಗಿಯಾಗುತ್ತಿದ್ದಾರೆ. ಕರ್ನಾಟಕದ 13 ಕಬ್ಬಡಿ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಮೂರು ಜಾಗಗಳಲ್ಲಿ ಮೂರು ಹಂತಗಳಲ್ಲಿ ಈ ಟೂರ್ನಿ ನಡೆಯಲಿದೆ.
ಒಟ್ಟು ಎಂಟು ತಂಡಗಳು ಟೂರ್ನಿಯಲ್ಲಿ ಭಾಗಿ
ದಿಲರ್‌ ದಿಲ್ಲಿ, ತೆಲುಗು ಬುಲ್ಸ್‌, ಮುಂಬೈ ಚೆ ರಾಜೇ, ಪುಣೆ ಪ್ರೈಡ್‌, ಬೆಂಗಳೂರು ರೈನೋಸ್‌, ಹರಿಯಾಣ ಹೀರೋಸ್‌, ಪಾಂಡಿಚೇರಿ ಪ್ರಿಡಿಯೇಟರ್ಸ್‌ ಹಾಗೂ ಚೆನ್ನೈ ಚಾಲೆಂಜರ್ಸ್‌

ಅರ್ಜುನ್ ಅವಾರ್ಡ್​​ ವಿಜೇತರಾದ ಹೊನ್ನಪ್ಪ ಗೌಡ ಈ ಬಗ್ಗೆ ಮಾತನಾಡಿ, ಈ ಟೂರ್ನಮೆಂಟ್ ಪ್ರೋ ಕಬ್ಬಡಿಗಿಂತ ಯಶಸ್ವಿಯಾಗಿ ನಡೆಯಲಿದೆ. ರಾಜ್ಯ ಮತ್ತು ದೇಶದ ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಯೋಜನೆ ಗೊಂಡಿರುವ ಈ ಕ್ರೀಡಾಕೂಟ ಮುಂಬರುವ ಕಬಡ್ಡಿ ವಿಶ್ವಕಪ್​ಗೆ ಒಳ್ಳೆಯ ಆಟಗಾರರನ್ನು ಪರಿಚಯಿಸುವ ಎಲ್ಲ ಸಾಧ್ಯತೆಗಳನ್ನು ಹೊಂದಿದೆ ಎಂದು ತಿಳಿಸಿದರು. ಪ್ರಶಸ್ತಿ ವಿಜೇತ ತಂಡ 1.25 ಕೋ.ರೂ. ಹಾಗೂ ರನ್ನರ್‌ ಅಪ್‌ ತಂಡವು 75 ಲಕ್ಷ ರೂ. ಪಡೆಯಲಿದೆ ಎಂದು ಇದೇ ವೇಳೆ ತಿಳಿಸಿದರು.

ABOUT THE AUTHOR

...view details