ಹೈದರಾಬಾದ್:ವಿಶ್ವಕಪ್ ಟೂರ್ನಿ ಆರಂಭದಲ್ಲಿ ಹತ್ತು ತಂಡಗಳ ನಾಯಕರು ಬ್ರಿಟನ್ ರಾಣಿ ಎರಡನೇ ಎಲಿಜಬೆತ್ರನ್ನು ಭೇಟಿ ಮಾಡಿದ್ದರು.
ಈ ಸೌಹಾರ್ದ ಭೇಟಿಯ ವೇಳೆ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮದ್ ಧರಿಸಿದ್ದ ಧಿರಿಸು ಎಲ್ಲರ ಗಮನ ಸೆಳೆದಿತ್ತು. ಇದೇ ಡ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಗರ ಬಾಯಿಗೆ ಆಹಾರವಾಗಿತ್ತು.
ಅಬ್ಬರಿಸಿದ ವಿಂಡೀಸ್ ವೇಗಿಗಳು... ಪ್ರಥಮ ಪಂದ್ಯದಲ್ಲೇ ಪಾಕ್ ಹೀನಾಯ ಪ್ರದರ್ಶನ..!
ಬಿಳಿ ಬಣ್ಣದ ಸಲ್ವಾರ್ ಕಮಿಜ್ ಮೇಲೆ ಪಾಕಿಸ್ತಾನ ತಂಡದ ಹಸಿರು ಬ್ಲೇಜರ್ ಧರಿಸಿದ್ದರು. ವಿಶೇಷವೆಂದರೆ ತಮ್ಮ ತಂಡದ ನಾಯಕನ ವೇಷ ಭೂಷಣವನ್ನು ಅದೇ ದೇಶದ ಮಂದಿ ಹಾಸ್ಯ ಮಾಡಿದ್ದರು.
ಪಾಕಿಸ್ತಾನ ನಾಯಕ ದೇಶದ ಅಸ್ಮಿತೆಯನ್ನು ತೋರಿಸುವ ಡ್ರೆಸ್ ಹಾಕಿರುವುದನ್ನು ಭಾರತೀಯ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಶತ್ರುರಾಷ್ಟ್ರದ ಕ್ರಿಕೆಟ್ ತಂಡದ ನಾಯಕನ ಈ ನಡೆಯನ್ನು ಹಲವಾರು ಭಾರತೀಯರು ಕೊಂಡಾಡಿದ್ದಾರೆ. ಈ ಮೂಲಕ ದೇಶ ಹಾಗೂ ಗಡಿ ಮೀರಿ ಒಂದೊಳ್ಳೆ ವಿಚಾರಕ್ಕೆ ಭಾರತೀಯರು ವಿಶ್ವಮಟ್ಟದಲ್ಲಿ ಮಾದರಿಯಾಗಿದ್ದಾರೆ.