ಕರ್ನಾಟಕ

karnataka

ETV Bharat / briefs

ಹನುಮ ವಿಹಾರಿ ಇನ್ಮೇಲೆ ಸಂಸಾರಿ.. ಇಷ್ಟಪಟ್ಟ ಹುಡುಗಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್‌!

ಟೀಂ ಇಂಡಿಯಾದ ಮತ್ತೊಬ್ಬ ಬ್ಯಾಚುಲರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುದಿನಗಳ ಗೆಳತಿ ಜತೆ ಹನುಮ ವಿಹಾರಿ ಸಪ್ತಪದಿ ತುಳಿದಿದ್ದಾರೆ.​

By

Published : May 21, 2019, 11:41 PM IST

ಹನುಮ ವಿಹಾರಿ ಮದುವೆ

ಹೈದರಾಬಾದ್​:ಟೀಂ ಇಂಡಿಯಾ ಟೆಸ್ಟ್ ಪಂದ್ಯದ ಆಟಗಾರ ಹನುಮ ವಿಹಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ಇಷ್ಟಪಟ್ಟ ಹುಡುಗಿ ಜತೆ ಇಂದು ಸಪ್ತಪದಿ ತುಳಿದಿದ್ದಾರೆ.

ಫ್ಯಾಷನ್​ ಡಿಸೈನರ್​ ಆಗಿರುವ ಪ್ರೀತಿ ರಾಜ್​ ಜೊತೆ ಟೀಂ ಇಂಡಿಯಾದ ಹನುಮ ವಿಹಾರಿ, ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲೇ ​​ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದು ತೆಲಂಗಾಣದಲ್ಲಿ ನಡೆದ ಸರಳ ವಿವಾಹ ಸಮಾರಂಭದಲ್ಲಿ ಹಸೆಮಣೆ ಏರಿದ್ದಾರೆ.

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಶ್ರೇಯಸ್​ ಅಯ್ಯರ್​ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​​ ತಂಡದಲ್ಲಿ ಹನುಮ ವಿಹಾರಿ ಆಡಿದ್ದರು.ಟೀಂ ಇಂಡಿಯಾ ಪರ ನಾಲ್ಕು ಟೆಸ್ಟ್​ ಪಂದ್ಯ ಆಡಿಗಿರುವ ಹನುಮ ವಿಹಾರಿ, 23.86 ಸರಾಸರಿಯಲ್ಲಿ 167 ರನ್​ಗಳಿಕೆ ಮಾಡಿದ್ದಾರೆ. 56ರನ್​ ಅವರ ಗರಿಷ್ಠ ಸ್ಕೋರ್​ ಆಗಿದೆ. ಜತೆಗೆ 5 ವಿಕೆಟ್​ ಕೂಡ ಪಡೆದು ಕೊಂಡಿದ್ದಾರೆ.

ABOUT THE AUTHOR

...view details