ಕರ್ನಾಟಕ

karnataka

ETV Bharat / briefs

'1983ರ ಹಾಗಿಲ್ಲ ಪಾಕ್,​ ಈ ಸಲವೂ ಭಾರತದೆದುರು ಸೋಲು ಖಚಿತ' - ಪಾಕಿಸ್ತಾನ

ಜೂನ್​ 16ರಂದು ಭಾರತ-ಪಾಕ್​ ಮುಖಾಮುಖಿಯಾಗಲಿದ್ದು, ಕ್ರೀಡಾಭಿಮಾನಿಗಳು ಈ ಪಂದ್ಯ ವೀಕ್ಷಿಸಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಇಂಡೋ-ಪಾಕ್​

By

Published : Jun 12, 2019, 9:33 PM IST

ನವದೆಹಲಿ:ವಿಶ್ವಕಪ್​ ಮಹಾಸಮರದಲ್ಲಿ ಜೂನ್​ 16ರಂದು ಸಾಂಪ್ರದಾಯಿಕ ಎದುರಾಳಿ ತಂಡ ಭಾರತ-ಪಾಕ್​ ಮುಖಾಮುಖಿಯಾಗಲಿದ್ದು, ಕ್ರೀಡಾಭಿಮಾನಿಗಳು ಪಂದ್ಯ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಐಸಿಸಿ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಇಲ್ಲಿಯವರೆಗೆ ಪಾಕ್​ ವಿರುದ್ಧ ಸೋಲು ಕಂಡಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ.

1983ರ ವಿಶ್ವಕಪ್​ ವಿಜೇತ ಭಾರತ ತಂಡದ ಕ್ಯಾಪ್ಟನ್​ ಕಪಿಲ್​ ದೇವ್​ ಮಾತನಾಡಿದ್ದು, ಪಾಕಿಸ್ತಾನ 1983ರ ತಂಡದ ರೀತಿಯಲ್ಲಿಲ್ಲ. ಈ ಸಲದ ವಿಶ್ವಕಪ್​​ನಲ್ಲೂ ಭಾರತ ಸುಲಭ ಗೆಲುವು ದಾಖಲು ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಮಾಜಿ ಕ್ರಿಕೆಟಿಗ ಕಪಿಲ್​ ದೇವ್​

ಪ್ರಸಕ್ತ ವಿಶ್ವಕಪ್​​ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಕೊಹ್ಲಿ ಸೇನೆ ಈ ಸಲವೂ ಪಾಕ್​ ವಿರುದ್ಧ ಗೆಲುವು ದಾಖಲು ಮಾಡಲಿದ್ದು, ಈ ಹಿಂದಿನ ರೆಕಾರ್ಡ್​ ಮುಂದುವರೆಸಲಿದೆ ಎಂದಿದ್ದಾರೆ. ಖಾಸಗಿ ಸುದ್ದಿವಾಹಿನಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಕಪಿಲ್​​, 1983ರಲ್ಲಿ ಪಾಕಿಸ್ತಾನ ತಂಡ ಭಾರತಕ್ಕಿಂತಲೂ ಸದೃಢವಾಗಿತ್ತು. ಆದರೆ ಇದೀಗ ಭಾರತ ಹೆಚ್ಚು ಬಲಿಷ್ಠವಾಗಿದ್ದು, ಗೆಲುವು ಖಚಿತ ಎಂದಿದ್ದಾರೆ.

ABOUT THE AUTHOR

...view details