ನವದೆಹಲಿ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಥಮ ಚಂದ್ರಯಾನ ನೌಕೆ ಭಾರತದಲ್ಲಿ ನಿರ್ಮಾಣವಾಗಲಿದೆ.
ಭಾರತದ ತಾಖತ್ ಅಮೆರಿಕಾಗೂ ಗೊತ್ತು.. ಇಂಡಿಯಾದಲ್ಲೇ ನಾಸಾದ ಚಂದ್ರಯಾನ ನೌಕೆ ನಿರ್ಮಾಣ!
ಸುಮಾರು 250 ಕೋಟಿ ಅಮೆರಿಕನ್ ಡಾಲರ್ ವ್ಯಯಿಸಲಾಗುತ್ತಿರುವ ಈ ಯೋಜನೆ 2021ರಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಲಿದೆ. ಈ ಮೊದಲು 2020ರ ಸೆಪ್ಟೆಂಬರ್ನಲ್ಲಿ ಉಡಾವಣೆ ಮಾಡುವುದಾಗಿ ಘೋಷಿಸಿತ್ತು.
ಸುಮಾರು 250 ಕೋಟಿ ಅಮೆರಿಕನ್ ಡಾಲರ್ ವ್ಯಯಿಸಲಾಗುತ್ತಿರುವ ಈ ಯೋಜನೆ 2021ರಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಲಿದೆ. ಈ ಮೊದಲು 2020ರ ಸೆಪ್ಟೆಂಬರ್ನಲ್ಲಿ ಉಡಾವಣೆ ಮಾಡುವುದಾಗಿ ನಾಸಾ ಘೋಷಿಸಿತ್ತು.
ನಾಸಾದ ಚಂದ್ರಯಾನ ನೌಕೆ ವಿನ್ಯಾಸದ ಜವಾಬ್ದಾರಿಯನ್ನು 'ಟೀಮ್ ಇಂಡಸ್' ಎನ್ನುವ ಭಾರತೀಯ ಕಂಪೆನಿ ವಹಿಸಿಕೊಂಡಿದೆ. ವಿಶೇಷವೆಂದರೆ ನೌಕೆಯ ನಿರ್ಮಾಣವನ್ನು ಬೇರೆ ದೇಶದ ಕಂಪೆನಿಯೊಂದಕ್ಕೆ ಇದೇ ಮೊದಲ ಬಾರಿಗೆ ನೀಡಿದೆ.ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇದೇ ಜುಲೈನಲ್ಲಿ ಚಂದ್ರಯಾನ-2 ಉಡಾವಣೆ ನಡೆಸಲಿದೆ. ಈ ಸಂಬಂಧ ಇಸ್ರೋ ಎಲ್ಲ ರೀತಿಯ ತಯಾರಿಗಳನ್ನೂ ಮಾಡಿಕೊಳ್ಳುತ್ತಿದೆ.