ಕರ್ನಾಟಕ

karnataka

By

Published : Jun 16, 2019, 3:26 PM IST

ETV Bharat / briefs

ವಿಶ್ವಕಪ್​ನಲ್ಲಿ ದ್ರಾವಿಡ್​ ದಾಖಲೆ ಬ್ರೇಕ್​ ಮಾಡಿದ ಎಂಎಸ್​ ಧೋನಿ

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಭಾರತ ತಂಡದ ಪರ ಅತಿ ಹೆಚ್ಚು ಪಂದ್ಯವಾಡಿದ ಎರಡನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.

dhoni

ಮ್ಯಾಂಚೆಸ್ಟರ್​: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಭಾರತ ತಂಡದ ಪರ ಅತಿ ಹೆಚ್ಚು ಪಂದ್ಯವಾಡಿದ ಎರಡನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.

ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 341 ನೇ ಪಂದ್ಯವಾಡುತ್ತಿರುವ ಧೋನಿ ಕನ್ನಡಿಗ ರಾಹುಲ್​​ ದ್ರಾವಿಡ್(340)​ ದಾಖಲೆ ಬ್ರೇಕ್​ ಮಾಡಿದರು. ಧೋನಿಯನ್ನು ಹೊರೆತುಪಡಿಸಿದರೆ ಭಾರತ ತಂಡದ ಬ್ಯಾಟಿಂಗ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಸಚಿನ್​ ತೆಂಡೂಲ್ಕರ್​ 463 ಪಂದ್ಯಗಳನ್ನಾಡಿದ್ದಾರೆ.

2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಧೋನಿ 2007 ರಲ್ಲಿ ಟಿ20 ತಂಡದ ನಾಯಕನಾಗಿ ಮೊದಲ ವಿಶ್ವಕಪ್​ ಟ್ರೋಫಿಯನ್ನು ಭಾರತಕ್ಕೆ ದೊರೆಕಿಸಿಕೊಟ್ಟಿದ್ದರು. 2011 ರಲ್ಲಿ ಕೂಡ ಏಕದಿನ ವಿಶ್ವಕಪ್​ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದರು.

ಭಾರತ ತಂಡದ ಪರ ಹೆಚ್ಚು ಪಂದ್ಯವಾಡಿರುವ ಆಟಗಾರರು:
ಸಚಿನ್​ ತೆಂಡೂಲ್ಕರ್​ 461
ಮಹೇಂದ್ರ ಸಿಂಗ್​ ಧೋನಿ 341
ರಾಹುಲ್​ ದ್ರಾವಿಡ್​ 340
ಮೊಹಮ್ಮದ್​ ಅಜರುದ್ದೀನ್​ 334
ಸೌರವ್​ ಗಂಗೂಲಿ 311
ಯುವರಾಜ್​ ಸಿಂಗ್​ 304

ABOUT THE AUTHOR

...view details