ಲಂಡನ್:ನಾಳೆ ಐಸಿಸಿ ವಿಶ್ವಕಪ್ನ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ-ಪಾಕ್ ಮುಖಾಮುಖಿಯಾಗುತ್ತಿದ್ದು, ಉಭಯ ದೇಶದ ಕ್ರೀಡಾಭಿಮಾನಿಗಳಲ್ಲಿ ಈಗಾಗಲೇ ಪಂದ್ಯದ ಕಿಚ್ಚು ಜೋರಾಗಿದೆ. ಮ್ಯಾಚ್ ವೀಕ್ಷಣೆ ಮಾಡುವ ಜೋಶ್ನಲ್ಲಿ ಯಾವುದೇ ಅಹಿತಕರ ಘಟನೆ ನಡೆಸದಂತೆ ಪಾಕ್ ಮಾಜಿ ಕ್ರಿಕೆಟಿಗ ವಸೀಂ ಅಕ್ರಮ್ ಕ್ರೀಡಾಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಉಭಯ ದೇಶಗಳ ನಡುವಿನ ಪಂದ್ಯ ನೋಡಿ ಆನಂದಿಸಿ. ಕ್ರೀಡೆಯಲ್ಲಿ ಯಾವುದಾದರೊಂದು ತಂಡ ಗೆಲ್ಲುವುದು ಸಹಜ. ಮತ್ತೊಂದು ತಂಡ ಸೋಲಲೇಬೇಕು. ಇದೇ ವಿಷಯವನ್ನಿಟ್ಟುಕೊಂಡು ಕ್ರೀಡಾಭಿಮಾನಿಗಳು ಶಾಂತಿ ಕದಡುವ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದ್ದಾರೆ.