ನವದೆಹಲಿ:ರಿಲಾಯನ್ಸ್ ಸಮೂಹದ ಅಧ್ಯಕ್ಷ ಮುಖೇಶ್ ಅಂಬಾನಿ ಹಾಗು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉದಯ್ ಕೋಟಕ್ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಬೆನ್ನು ತಟ್ಟಿದ್ದಾರೆ. ಇದು ಭಾರತೀಯ ರಾಜಕಾರಣದ ಚುನಾವಣಾ ಇತಿಹಾಸದಲ್ಲಿ ಅಪರೂಪದ ವಿದ್ಯಮಾನವಾಗಿದೆ.
ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದೇವ್ರಾಗೆ ಕೆಲ ದಿನಗಳ ಹಿಂದೆ ಮುಖೇಶ್ ಅಂಬಾನಿ ಬೆಂಬಲ ಸೂಚಿಸಿದ್ದರು. ಇದೀಗ ಕೈ ಅಭ್ಯರ್ಥಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉಪಾಧ್ಯಕ್ಷ ಹಾಗು ವ್ಯವಸ್ಥಾಪಕ ನಿರ್ದೇಶಕ ಉದಯ್ ಕೋಠಕ್ ಬೆನ್ನು ತಟ್ಟಿದ್ದಾರೆ.
ಭಾರತೀಯ ಚುನಾವಣೆಯಲ್ಲಿ ಅಪರೂಪದ ವಿದ್ಯಮಾನ, ಅಭ್ಯರ್ಥಿಗಳ ಬೆನ್ನಿಗೆ ನಿಂತ ಕಾರ್ಪೋರೇಟ್ ದಿಗ್ಗಜರು! - ಲೋಕಸಭಾ ಕ್ಷೇತ್ರ
ರಾಜಕೀಯ ನಾಯಕರುಗಳ ಹಿಂದೆ ಕಾರ್ಪೋರೇಟ್ ಜಗತ್ತಿನ ಭಾರಿ ಕುಳಗಳು ಇದ್ದಾರೆ ಎಂಬುದು ನಿಜ. ಆದರೆ, ಭಾರತದ ಚುನಾವಣಾ ಇತಿಹಾಸದಲ್ಲಿ ಕಾರ್ಪೋರೇಟ್ ಜಗತ್ತಿನ ದಿಗ್ಗಜರು ಬಹಿರಂಗವಾಗಿ ಪಕ್ಷಕ್ಕೆ ಅಥವಾ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸದ ನಿದರ್ಶನಗಳು ಅಪರೂಪ. ಈ ಸಂಪ್ರದಾಯವನ್ನು ಮುಖೇಶ್ ಅಂಬಾನಿ ಮತ್ತು ಉದಯ್ ಕೋಟಕ್ ಮುರಿದಿದ್ದಾರೆ.
ಕಾರ್ಪೋರೇಟ್ ದಿಗ್ಗಜರು
ದೇಶದಲ್ಲಿರುವ ಉದ್ಯಮ ಜಗತ್ತು ಸಾಂಪ್ರದಾಯಿಕವಾಗಿ ರಾಜಕೀಯ ನಾಯಕರುಗಳ ಜೊತೆ ಕಾಣಿಸಿಕೊಳ್ಳುವುದನ್ನು ಬಯಸುತ್ತಿರಲಿಲ್ಲ. ಕೈಗಾರಿಕೋದ್ಯಮಿಗಳು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಪಕ್ಷದ ಪರ ಇರುತ್ತಿದ್ದರು.
ಅಂಬಾನಿ ಹಾಗು ಉದಯ್ ಕೋಠಕ್ ನಡೆ ಸಹಜವಾಗಿಯೇ ಬಿಜೆಪಿ ಹಾಗು ಶಿವಸೇನೆಯನ್ನು ಕೆರಳಿಸಿದೆ. ಶಿವಸೇನೆಯ ಸಾವಂತ್‌ಗೆ ಹೋಲಿಸಿದರೆ ಮಿಲಿಂದ್ ದೇವ್ರಾ, ಉದ್ಯಮ ಸ್ನೇಹಿ ಮನೋಭಾವ ಹೊಂದಿದ್ದಾರೆ ಎನ್ನಲಾಗುತ್ತಿದೆ.