ಕರ್ನಾಟಕ

karnataka

ETV Bharat / briefs

ಜಿಲ್ಲೆಯಲ್ಲಿ 250 ಆಮ್ಲಜನಕ ಹಾಸಿಗೆ ಹೆಚ್ಚಿಸಲು ಕ್ರಮ: ವಿ.ಸೋಮಣ್ಣ - V somanna

ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸೋಮವಾರಪೇಟೆಯಲ್ಲಿ 50, ಪಾಲಿಬೆಟ್ಟದಲ್ಲಿ 20, ಕುಟ್ಟ ಗ್ರಾಮದಲ್ಲಿ 20 ಸೇರಿದಂತೆ ಜಿಲ್ಲೆಯ ಇನ್ನೂ ಹಲವು ಕಡೆ ಆಮ್ಲಜನಕ ಹಾಸಿಗೆ ಹೆಚ್ಚಿಸಲಾಗುವುದು.

Increasing oxygen bed in kodagu
Increasing oxygen bed in kodagu

By

Published : May 6, 2021, 10:06 PM IST

Updated : May 6, 2021, 10:33 PM IST

ಕೊಡಗು:ಕರ್ಫ್ಯೂ ಜಾರಿಯಲ್ಲಿದ್ದರೂ ಸಹ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಗರದ ವೈದ್ಯಕೀಯ ಕಾಲೇಜು, ಸೋಮವಾರ ಪೇಟೆ, ಕುಟ್ಟ, ಪಾಲಿಬೆಟ್ಟ ಸೇರಿದಂತೆ ಇನ್ನೂ ಹಲವು ಕಡೆ ಆಮ್ಲಜನಕ ಹಾಸಿಗೆ ಹೆಚ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಮತ್ತು ಚಿಕಿತ್ಸೆ ಸಂಬಂಧಿಸಿದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ನಗರದ ಜಿ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಸೋಮವಾರಪೇಟೆಯಲ್ಲಿ 50, ಪಾಲಿಬೆಟ್ಟದಲ್ಲಿ 20, ಕುಟ್ಟ ಗ್ರಾಮದಲ್ಲಿ 20 ಸೇರಿದಂತೆ ಜಿಲ್ಲೆಯ ಇನ್ನೂ ಹಲವು ಕಡೆ ಆಮ್ಲಜನಕ ಹಾಸಿಗೆ ಹೆಚ್ಚಿಸಲಾಗುವುದು. ಹಾಸಿಗೆ ಕೊರತೆ ಎಂಬುದು ಕೇಳಿ ಬರಬಾರದು ಎಂದರು.


ಕೋವಿಡ್ ವಾರಿಯರ್ಸ್​​​​ಗಳು ಮತ್ತು 45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಲಸಿಕೆ ಹಾಕಬೇಕು. ಲಸಿಕೆ ಕೊರತೆ ಎಂಬುದು ಕೇಳಿ ಬರಬಾರದು. ರೆಮ್‍ಸಿಡಿಮರ್ ಔಷಧವನ್ನು ಹೆಚ್ಚುವರಿಯಾಗಿ ತರಿಸಿಕೊಳ್ಳಲಾಗುತ್ತಿದೆ. ಪರೀಕ್ಷಾ ಕೇಂದ್ರದಲ್ಲಿ ನೂಕು ನುಗ್ಗಲು ಉಂಟಾಗದಂತೆ ಕ್ರಮವಹಿಸಬೇಕು ಎಂದರು.

ವಾರದಲ್ಲಿ ಎರಡು ದಿನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಜಿಲ್ಲೆಯಲ್ಲಿ ಉಳಿದು ಕೋವಿಡ್ ನಿಯಂತ್ರಣ ಮಾಡುವಲ್ಲಿ ಶ್ರಮಿಸಲಿದ್ದಾರೆ. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಕೋವಿಡ್ 19 ನಿಯಂತ್ರಣ ಮಾಡುವಲ್ಲಿ ಚರ್ಚಿಸಿ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ನೀಡಿದರು.

ಜಿಲ್ಲೆಯಲ್ಲಿ 250 ಆಮ್ಲಜನಕ ಹಾಸಿಗೆ ಹೆಚ್ಚಿಸಲು ಕ್ರಮ: ವಿ.ಸೋಮಣ್ಣ



ಸಂಸ್ಥೆಗಳಿಗೆ ಅಗತ್ಯ ಸಹಕಾರ ನೀಡಿ

ಕೊರೊನಾ ನಿಯಂತ್ರಣ ಜೊತೆಗೆ ಅಗತ್ಯ ಸಹಕಾರಕ್ಕೆ ಜಿಲ್ಲೆಯಲ್ಲಿನ ರೋಟರಿ, ಲಯನ್ಸ್, ಚೆಂಬರ್ ಆಫ್ ಕಾಮರ್ಸ್ ಹೀಗೆ ಹಲವು ಸಂಘ ಸಂಸ್ಥೆಗಳು ಜಿಲ್ಲಾಡಳಿತದ ಜೊತೆ ಕೈಜೋಡಿಸಲು ಮುಂದಾಗಿದ್ದು, ಇಂತಹ ಸಂಸ್ಥೆಗಳಿಗೆ ಅಗತ್ಯ ಸಹಕಾರ ನೀಡುವಂತೆ ಸೂಚನೆ ನೀಡಿದರು.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿರುವ 13 ಸಾವಿರ ಲೀಟರ್ ಸಾಮರ್ಥ್ಯದ ಆಮ್ಲಜನಕ ಟ್ಯಾಂಕ್‍ಗೆ ಕಾಲಕಾಲಕ್ಕೆ ಆಮ್ಲಜನಕ ಪೂರೈಸುವಲ್ಲಿ ಮುತುವರ್ಜಿ ವಹಿಸಬೇಕು. ಯಾವುದೇ ರೀತಿಯಲ್ಲಿ ಆಮ್ಲಜನಕ ಕೊರತೆ ಉಂಟಾಗಬಾರದು ಎಂದರು.

ಕೋವಿಡ್ 19 ನಿರ್ವಹಣೆ ಸಂಬಂಧ ಜಿಲ್ಲೆಗೆ ಹೆಚ್ಚಿನ ಹಣ ಬೇಕಿದ್ದಲ್ಲಿ ಕೂಡಲೇ ಒದಗಿಸಲಾಗುವುದು. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗಮನಹರಿಸುವುದು ಪ್ರಥಮ ಆದ್ಯತೆ ಆಗಬೇಕು. ಆ ದಿಸೆಯಲ್ಲಿ ಎಲ್ಲಾ ಹಂತದ ವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಾಕೀತು ಮಾಡಿದರು.

ಜಿಲ್ಲಾಸ್ಪತ್ರೆಯಲ್ಲಿ ಮರಣ ಪ್ರಮಾಣ ಹೆಚ್ಚಾಗುತ್ತಿದೆ

ಅಲ್ಲದೇ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ವೈದ್ಯರು ಹಾಗೂ ಶುಶ್ರೂಷಕರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು. ಕೋವಿಡ್ 19 ಪಾಸಿಟಿವ್ ಬಂದವರಿಗೆ ವೈದ್ಯರು ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.

ಇದಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಧ್ವನಿಗೂಡಿಸಿದರು. ಇದುವರೆಗೂ ನಿಮ್ಮ(ವೈದ್ಯರ) ಬೆನ್ನು ತಟ್ಟಿದ್ದೇವೆ. ಅದರಂತೆ ಕರ್ತವ್ಯ ನಿರ್ವಹಿಸಿಕೊಂಡು ಹೋಗಬೇಕು. ಕೋವಿಡ್ ಆಸ್ಪತ್ರೆಯಲ್ಲಿ ಇರುವ ಸೋಂಕಿತರಿಗೆ ಕುಡಿಯಲು ಬಿಸಿ ನೀರು ಮತ್ತು ಬಿಸಿಯಾದ ಊಟ ಪೂರೈಸಬೇಕು. ಯಾವುದೇ ರೀತಿಯ ದೂರುಗಳು ಬರದಂತೆ ಗಮನಹರಿಸಬೇಕು ಎಂದು ಸೂಚಿಸಿದರು.

ವೈದ್ಯರು ಮತ್ತು ಶುಶ್ರೂಷಕರ ಕೊರತೆ ಇದ್ದಲ್ಲಿ ನೇಮಕ ಮಾಡಿಕೊಳ್ಳಿ, ಬೆಂಗಳೂರಿನಿಂದ ಸಾಕಷ್ಟು ಶುಶ್ರೂಷಕರು ಕೊಡಗು ಜಿಲ್ಲೆಗೆ ಆಗಮಿಸಿದ್ದು, ಅಂತವರನ್ನು ನಿಯೋಜನೆ ಮಾಡಿಕೊಳ್ಳಿ ಎಂದು ಶಾಸಕರು ಸಲಹೆ ಮಾಡಿದರು.

ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಯಲ್ಲಿರುವ ಸೋಂಕಿತರಿಗೆ ಬಿಸಿನೀರು ಮತ್ತು ಬಿಸಿಊಟದಲ್ಲಿ ಕೊರತೆಯಾಗದಂತೆ ಕಾಳಜಿ ವಹಿಸಬೇಕು ಎಂದು ತಾಕೀತು ಮಾಡಿದರು.

Last Updated : May 6, 2021, 10:33 PM IST

ABOUT THE AUTHOR

...view details