ಕರ್ನಾಟಕ

karnataka

ETV Bharat / briefs

ಬಿತ್ತನೆ ಕಾರ್ಯಕ್ಕೆ ಎತ್ತುಗಳ ಕೊರತೆ.. ಸಮಸ್ಯೆ ಪರಿಹಾರಕ್ಕೆ ಉಪಾಯ ಕಂಡುಕೊಂಡಿದ್ದಾರೆ ರೈತರು - undefined

ರಾಜ್ಯಾದ್ಯಂತ ಎರಡು, ಮೂರು ವರ್ಷಗಳಿಂದ ಉಂಟಾದ ತೀವ್ರ ಬರಗಾಲದಿಂದಾಗಿ ರೈತರು ಕಂಗಾಲಾಗಿ ರಾಸುಗಳನ್ನು ಮಾರಾಟ ಮಾಡಿದ್ದರು. ಈ ವರ್ಷದ ಮುಂಗಾರಿನ ಆರಂಭವು ಕೃಷಿ ಚಟುವಟಿಕೆಗೆ ಪೂರಕವಾಗಿದ್ದು, ರೈತರೆಲ್ಲ ಯಂತ್ರಗಳ ಬಳಕೆಗೆ ಮುಂದಾಗಿದ್ದಾರೆ. ಇನ್ನೊಂದೆಡೆ ರೈತರ ಮಿತ್ರ ಎಂದೇ ಬಂದ ಹೆಸರಾದ ಎತ್ತುಗಳ ಕೊರತೆಯು ಕಾಣುತ್ತಿದೆ.

ಎತ್ತುಗಳ ಕೊರತೆ, ನಿರ್ವಹಣೆ ಸಮಸ್ಯೆಯಿಂದಾಗಿ ಯಂತ್ರಗಳ ಮೊರೆ ಹೋಗುತ್ತಿರುವ ರೈತರು

By

Published : Jun 14, 2019, 12:26 PM IST

ಚಿಕ್ಕೋಡಿ:ತೀವ್ರ ಬರದಿಂದ ಕಂಗಾಲಾಗಿದ್ದ ರೈತರು ಮುಂಗಾರು ಪ್ರವೇಶದಿಂದ ಹರ್ಷಗೊಂಡಿದ್ದಾರೆ. ಆದರೆ, ಮೇವು, ನೀರಿನ ಕೊರತೆಯಿಂದಾಗಿ ಜಾನುವಾರುಗಳನ್ನು ಮಾರಾಟ ಮಾಡಿರುವ ರೈತರು ಬಿತ್ತನೆ ಕಾರ್ಯಕ್ಕೆ ಎತ್ತುಗಳ ಕೊರತೆ ಎದುರಿಸುವಂತಾಗಿದೆ.

ಎತ್ತುಗಳ ಕೊರತೆ, ನಿರ್ವಹಣೆ ಸಮಸ್ಯೆಯಿಂದಾಗಿ ಯಂತ್ರಗಳ ಮೊರೆ ಹೋಗುತ್ತಿರುವ ರೈತರು

ರೈತರ ಕೃಷಿ ಚಟುವಟಿಕೆಗಳಿಗೆ ಎತ್ತುಗಳನ್ನೇ ಅವಲಂಬಿಸಿರುವುದು ವಾಡಿಕೆ. ಆದರೆ, ಕಳೆದ ಎರಡು ವರ್ಷಗಳಿಂದ ಎದುರಾದ ಬರಗಾಲದ ತೀವ್ರತೆ, ಆರ್ಥಿಕ ಸಮಸ್ಯೆಯಿಂದಾಗಿ ಬಹುತೇಕ ರೈತರು ರಾಸುಗಳ ಹೊಟ್ಟೆ ತುಂಬಿಸಲಾಗದೇ ಸಂತೆಯಲ್ಲಿ ಮಾರಾಟ ಮಾಡಿ ಕೈತೊಳೆದು ಕೊಂಡಿದ್ದರು.

ಮೇವಿನ ಕೊರತೆ ಹಾಗೂ ಯಂತ್ರಗಳ ಬಳಕೆ ಹೆಚ್ಚಾದ ಹಿನ್ನೆಲೆ ಎತ್ತುಗಳ ಸಂಖ್ಯೆ ಕಡಿಮೆಯಾಗಿದೆ. ರಾಸುಗಳ ನಿರ್ವಹಣೆಗೆ ಕಾಳು, ಪೌಷ್ಠಿಕ ಆಹಾರವನ್ನು ನೀಡಬೇಕು. ಅದೆಲ್ಲ ಖರ್ಚಿನ ಬಾಬತ್ತು ಎನ್ನುತ್ತಾರೆ ರೈತರು.

ವಾಡಿಕೆಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ರಂಟೆ, ನೇಗುಲು ಹಿಡಿದು ಬಿತ್ತನೆ ಕಾರ್ಯಗಳಿಗೆ ಚಾಲನೆ ದೊರೆಯುತ್ತದೆ. ಎತ್ತುಗಳ ಕೊರತೆಯಿಂದಾಗಿ ಟ್ರ್ಯಾಕ್ಟರ್, ಪವರ್ ಟಿಲ್ಲರ್‌ಗಳನ್ನು ಉಪಯೋಗಿಸುತ್ತಿದ್ದಾರೆ. ಇವುಗಳ ಬಳಕೆಯಿಂದ ಕೆಲಸಗಳು ವೇಗವಾಗಿ ಸಾಗುತ್ತಿವೆ. ಕೂಲಿ ಕಾರ್ಮಿಕರ ಸಮಸ್ಯೆ ನಿವಾರಣೆಯಾಗಿದೆ ಎಂಬುದು ರೈತರ ಮಾತಾಗಿದೆ.

ಎರಡು ವರ್ಷಗಳಿಂದ ಬರಕ್ಕೆ ತುತ್ತಾಗಿದ್ದ ರೈತರಿಗೆ ಮುಂಗಾರು ಮಂದಹಾಸ ಮೂಡಿಸಿರುವುದಂತೂ ಸುಳ್ಳಲ್ಲ.

For All Latest Updates

TAGGED:

ABOUT THE AUTHOR

...view details