ಕರ್ನಾಟಕ

karnataka

ETV Bharat / briefs

ದಾವಣಗೆರೆಯಲ್ಲಿ ಕೊರೊನಾದಿಂದಾಗಿ 15 ದಿನದೊಳಗೆ 80 ಮಂದಿ ಸಾವು - ದಾವಣಗೆರೆ ಕೊರೊನಾ ಮರಣ ಪ್ರಮಾಣ

ಸೋಂಕು ಇದೆ ಎಂದು ಗೊತ್ತಿದ್ದರೂ ನಿರ್ಲಕ್ಷ್ಯತೆವಹಿಸಿ ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಜನ ಬರುತ್ತಿದ್ದಾರೆ. ಇನ್ನು, ಬೆಡ್ ಸಮಸ್ಯೆ ಕಡಿಮೆಯಾಗಿದ್ದರೂ ಸಾವಿನ ಸಂಖ್ಯೆ ಮಾತ್ರ ಜಾಸ್ತಿಯಾಗುತ್ತಿರುವುದರಿಂದ ದಾವಣಗೆರೆ ಜನರು ಭಯಬೀತರಾಗಿದ್ದಾರೆ..

ದಾವಣಗೆರೆ
ದಾವಣಗೆರೆ

By

Published : Jun 15, 2021, 3:09 PM IST

ದಾವಣಗೆರೆ :ಜಿಲ್ಲೆಯಲ್ಲಿ ಬೆಡ್ ಸಮಸ್ಯೆ ಕಡಿಮೆಯಾಗಿದ್ದರೂ ಸಹ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲ, 15 ದಿನದಲ್ಲಿ 80 ಜನ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಸೋಂಕು ಹೆಚ್ಚಾಗಿರುವ 11 ಜಿಲ್ಲೆಗಳ ಪೈಕಿ ದಾವಣಗೆರೆ ಜಿಲ್ಲೆ ಕೂಡ ಒಂದಾಗಿದೆ.

ಅತಿ ಹೆಚ್ಚು ಸೋಂಕಿತರಿಗೆ ವೆಂಟಿಲೇಟರ್ ಅವಶ್ಯಕತೆ ಇದೆ. ಆದರೆ, ವೆಂಟಿಲೇಟರ್​ ಸರಿಯಾಗಿ ಲಭ್ಯವಾಗದ ಕಾರಣ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಸೋಂಕು ಇದೆ ಎಂದು ಗೊತ್ತಿದ್ದರೂ ನಿರ್ಲಕ್ಷ್ಯತೆವಹಿಸಿ ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಜನ ಬರುತ್ತಿದ್ದಾರೆ. ಇನ್ನು, ಬೆಡ್ ಸಮಸ್ಯೆ ಕಡಿಮೆಯಾಗಿದ್ದರೂ ಸಾವಿನ ಸಂಖ್ಯೆ ಮಾತ್ರ ಜಾಸ್ತಿಯಾಗುತ್ತಿರುವುದರಿಂದ ದಾವಣಗೆರೆ ಜನರು ಭಯಬೀತರಾಗಿದ್ದಾರೆ.

ABOUT THE AUTHOR

...view details