ಕರ್ನಾಟಕ

karnataka

ETV Bharat / briefs

ಪಾಕ್​ನಲ್ಲಿ ಆರ್ಥಿಕ ಸಂಕಷ್ಟ: ಭದ್ರತಾ ವೆಚ್ಚ ಕಡಿತ​ ಮಾಡಿದ ಸೇನೆ

ಪಾಕಿಸ್ತಾನದ ಇಂಟರ್​ ಸರ್ವೀಸ್ ಪಬ್ಲಿಕ್ ರಿಲೇಷನ್ಸ್​ನ ಡೈರೆಕ್ಟರ್​ ಜನರಲ್​, ಮೇಜರ್​ ಜನರಲ್​ ಆಸಿಫ್​ ಘಫೂರ್​ ಟ್ವಿಟ್ಟರ್​ನಲ್ಲಿ, ಮುಂದಿನ ಆರ್ಥಿಕ ವರ್ಷದಲ್ಲಿ ಪಾಕ್​ ಸೇನೆ ಸ್ವಯಂಪ್ರೇರಣೆಯಿಂದ ಭದ್ರತಾ ವೆಚ್ಚವನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದಿದ್ದಾರೆ.

By

Published : Jun 5, 2019, 1:34 PM IST

ಪಾಕಿಸ್ತಾನ

ಇಸ್ಲಾಮಾಬಾದ್​: ಪಾಕಿಸ್ತಾನದ ಈಗಿನ ಆರ್ಥಿಕ ಸ್ಥಿತಿಗತಿ ಉತ್ತಮವಾಗಿಲ್ಲ ಎನ್ನುವುದು ಜಗತ್ತಿಗೆ ಗೊತ್ತಿದೆ. ಈ ಮಧ್ಯೆ ದೇಶದ ಆರ್ಥಿಕ ಸಂಕಷ್ಟ ಅರಿತ ಸೇನೆ ಸ್ವಯಂಪ್ರೇರಣೆಯಿಂದ ಭದ್ರತಾವೆಚ್ಚವನ್ನು ಕಡಿತಗೊಳಿಸಲು ನಿರ್ಧರಿಸಿದೆ.

ಪಾಕಿಸ್ತಾನದ ಇಂಟರ್​ ಸರ್ವೀಸ್ ಪಬ್ಲಿಕ್ ರಿಲೇಷನ್ಸ್​ನ ಡೈರೆಕ್ಟರ್​ ಜನರಲ್​, ಮೇಜರ್​ ಜನರಲ್​ ಆಸಿಫ್​ ಘಫೂರ್​ ಟ್ವಿಟ್ಟರ್​ನಲ್ಲಿ ಈ ಮಾಹಿತಿ ನೀಡಿದ್ದಾರೆ. ಮುಂದಿನ ಆರ್ಥಿಕ ವರ್ಷದಲ್ಲಿ ಪಾಕ್​ ಸೇನೆ ಭದ್ರತಾ ವೆಚ್ಚವನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದಿದ್ದಾರೆ.

ಭದ್ರತಾ ಬಜೆಟ್‌ನ್ನು ಒಂದು ವರ್ಷ ಕಡಿತಗೊಳಿಸಲಾಗುತ್ತದೆ. ಆದರೆ ಎಲ್ಲಾ ಆತಂಕಗಳನ್ನು ಸೇನೆ ಸಮರ್ಥವಾಗಿ ನಿಭಾಯಿಸುತ್ತದೆ. ಸೂಕ್ತ ಆಂತರಿಕ ಮಾನದಂಡ ಆಧರಿಸಿಯೇ ಬಜೆಟ್‌​ ಕಡಿತಗೊಳಿಸಲಾಗುತ್ತದೆ ಎಂದು ಘಫೂರ್​ ಬರೆದುಕೊಂಡಿದ್ದಾರೆ.

ಪಾಕ್​ ಸೇನೆಯ ಸ್ವಯಂಪ್ರೇರಿತ ನಿರ್ಧಾರವನ್ನು ಪ್ರಧಾನಿ ಇಮ್ರಾನ್ ಖಾನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಹಲವು ಭದ್ರತಾ ಸವಾಲುಗಳ ನಡುವೆಯೂ ಮಿಲಿಟರಿ ಈ ನಡೆ ಮೆಚ್ಚುವಂಥದ್ದು ಎಂದಿದ್ದಾರೆ.

2018ರಲ್ಲಿ ಪಾಕ್,​ ಮಿಲಿಟರಿಗಾಗಿ 11.4 ಮಿಲಿಯನ್ ಅಮೆರಿಕನ್‌ ಡಾಲರ್​ ವ್ಯಯ ಮಾಡುವ ಮೂಲಕ ಭದ್ರತೆಗೆ ಅತೀ ಹೆಚ್ಚು ಹಣ ವ್ಯಯಿಸುವ ವಿಶ್ವದ 20ನೇ ರಾಷ್ಟ್ರವಾಗಿ ಹೊರಹೊಮ್ಮಿತ್ತು.

For All Latest Updates

TAGGED:

ABOUT THE AUTHOR

...view details