ಫುಟ್ ವೇರ್ ಶಾಪ್ನಲ್ಲೇ ಕಳ್ಳಭಟ್ಟಿ ವ್ಯಾಪಾರ: ಆರೋಪಿಯ ಬಂಧನ - Chamarajanagar illegal liquor sale
ಚಪ್ಪಲಿ ಅಂಗಡಿಯಲ್ಲಿ ಕಳ್ಳಭಟ್ಟಿ ಸಾರಾಯಿ ಮಾರುತ್ತಿದ್ದ ವ್ಯಕ್ತಿಯನ್ನು ಕೊಳ್ಳೇಗಾಲ ತಾಲೂಕಿನ ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
![ಫುಟ್ ವೇರ್ ಶಾಪ್ನಲ್ಲೇ ಕಳ್ಳಭಟ್ಟಿ ವ್ಯಾಪಾರ: ಆರೋಪಿಯ ಬಂಧನ Illegal liquor sale accused attested by excise officers in kollegala](https://etvbharatimages.akamaized.net/etvbharat/prod-images/768-512-06:57:44:1593523664-kn-cnr-kollegal-kalabati-kac10017-30062020185636-3006f-1593523596-744.jpg)
Illegal liquor sale accused attested by excise officers in kollegala
ಕೊಳ್ಳೇಗಾಲ:ಹನೂರು ತಾಲೂಕಿನ ಹಳೇಮಾರ್ಟಳ್ಳಿ ಗ್ರಾಮದ ಫುಟ್ ವೇರ್ ಅಂಗಡಿಯಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಅಂಗಡಿ ಮಾಲೀಕ ಚಂದ್ರನಾಯಕ (32) ಬಂಧಿತ ಆರೋಪಿ. ಅಂಗಡಿಯಲ್ಲಿ ಕಳ್ಳಭಟ್ಟಿಯನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕಿ ಮೀನಾ ಹಾಗೂ ಉಪ ನಿರೀಕ್ಷಕ ತನ್ವೀರ್ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
15 ಲೀಟರ್ ಕಳ್ಳಭಟ್ಟಿ, 10 ಕೆಜಿ ಚೆಕ್ಕೆ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕೊಳ್ಳೇಗಾಲ ಅಬಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.