ಅಕ್ರಮವಾಗಿ ಹಸು ಸಾಗಣೆ: ಇಬ್ಬರ ಬಂಧನ - Theerthahalli illegal cow transport
ಅಕ್ರಮವಾಗಿ ಹಸುಗಳನ್ನು ಕಳ್ಳತನ ಮಾಡಿ ಸಾಗಾಣೆ ಮಾಡುತ್ತಿದ್ದ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತುಂಗಾ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
![ಅಕ್ರಮವಾಗಿ ಹಸು ಸಾಗಣೆ: ಇಬ್ಬರ ಬಂಧನ Illegal cow transport two arrested](https://etvbharatimages.akamaized.net/etvbharat/prod-images/768-512-04:33:43:1593169423-kn-smg-03-cow-save-7204213-26062020160637-2606f-1593167797-913.jpg)
Illegal cow transport two arrested
ಶಿವಮೊಗ್ಗ:ಜಿಲ್ಲೆಯಲ್ಲಿಹಸುಗಳನ್ನು ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ತಾಲೂಕಿನ ತೀರ್ಥಹಳ್ಳಿ ರಸ್ತೆಯ ಕಾನೆಹಳ್ಳದ ಬಳಿ ತುಂಗಾ ನಗರ ಪೊಲೀಸರು ದಾಳಿ ಮಾಡಿ ಹಸುಗಳನ್ನು ರಕ್ಷಿಸಿದ್ದಾರೆ.
ಅಕ್ರಮವಾಗಿ ಹಸುಗಳನ್ನು ಕಳ್ಳತನ ಮಾಡಿ ಸಾಗಾಣೆ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ತುಂಗಾ ನಗರ ಪಿಎಸ್ಐ ತಿರುಮಲೇಶ್ ದಾಳಿ ನಡೆಸಿ, ಟಿಪ್ಪು ನಗರದ ಮಹಮ್ಮದ್ ಹಾಗೂ ಚಾಂದ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.