ಕರ್ನಾಟಕ

karnataka

ETV Bharat / briefs

ಬಳ್ಳಾರಿ ವಿವಿ ನೇಮಕಾತಿಯಲ್ಲಿ ಅಕ್ರಮ : ಎಬಿವಿಪಿ ಆರೋಪ - ನೇಮಕಾತಿ ಅಕ್ರಮ

ಬಳ್ಳಾರಿ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಎಬಿವಿಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಯುವರಾಜ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಬಿವಿಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಯುವರಾಜ

By

Published : May 23, 2019, 3:55 AM IST

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಎಬಿವಿಪಿ (ಅಖಿಲ ಭಾತರತೀಯ ವಿದ್ಯಾರ್ಥಿ ಪರಿಷತ್) ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯುವರಾಜ ದೂರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಬಿವಿಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಯುವರಾಜ

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ನೇಮಕಾತಿಗಾಗಿ 2016ರಿಂದ ಹೊರಡಿಸಿರುವ ಒಟ್ಟು ನಾಲ್ಕು ಪ್ರಕಟಣೆಗಳಲ್ಲಿ ಸಾಮ್ಯತೆ ಇಲ್ಲ. ಪ್ರತಿ ಪ್ರಕಟಣೆಯಲ್ಲಿಯೂ ಮೀಸಲಾತಿಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಮುಂಚಿನ ಉಪಕುಲಸಚಿವರ ನೇಮಕಾತಿ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿ ಎಂದಿತ್ತು. ಆದರೆ, ನಂತರ ಸಾಮಾನ್ಯ ವರ್ಗ ಮೀಸಲಾತಿ ನೀಡಲಾಗಿದೆ ಎಂದು ಆರೋಪಿಸಿದರು.

ಮೇ 6ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಹೈದರಾಬಾದ್ ಕರ್ನಾಟಕೇತರ ಎಂದು ತಪ್ಪಾಗಿ ಪ್ರಕಟಣೆ ನೀಡಿ ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವೆಸಗಿದ್ದಾರೆ. ಅರ್ಜಿ ಸಲ್ಲಿಕೆಗೆ ಕಾಲಾವಕಾಶವೂ ನೀಡದೇ ವಂಚಿಸಿದ್ದಾರೆ. ಕುಲಪತಿ ಪ್ರೊ.ಸುಭಾಷ್ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಪ್ರಶ್ನಿಸುವವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಸುತ್ತಾರೆ ಎಂದರು.

ABOUT THE AUTHOR

...view details