ಕರ್ನಾಟಕ

karnataka

ಅದೊಂದು ವಿಚಾರದಲ್ಲಿ ಟ್ರಂಪ್​ ಜೊತೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲಾರೆ; ಪೆನ್ಸ್​

By

Published : Jun 4, 2021, 6:17 PM IST

ಅಧ್ಯಕ್ಷರಾಗಿದ್ದ ಟ್ರಂಪ್ ಕೈಕೆಳಗೆ ಕೆಲಸ ಮಾಡಿದ ಪೆನ್ಸ್​, ಹಲವಾರು ಕಷ್ಟಗಳನ್ನು ಎದುರಿಸಬೇಕಾಯಿತು. ಅಧ್ಯಕ್ಷ ಟ್ರಂಪ್ ವಿರುದ್ಧ ಪದಚ್ಯುತಿ ಪ್ರಸ್ತಾವನೆಯೂ ಬಂದಿತ್ತು. ಆದರೆ ಇದನ್ನೆಲ್ಲ ಮೀರಿ ತಮ್ಮ ಬಾಸ್​ ಟ್ರಂಪ್​ ಜೊತೆಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದರು ಪೆನ್ಸ್​.

ill-likely-never-see-eye-to-eye-with-trump-mike-pence
ill-likely-never-see-eye-to-eye-with-trump-mike-pence

ನ್ಯೂ ಹ್ಯಾಂಪ್ ಶೈರ್ (ಯುಎಸ್) : ಜನವರಿ 6 ರಂದು ನಡೆದ ಕ್ಯಾಪಿಟಲ್ ಗಲಭೆಯ ವಿಚಾರದಲ್ಲಿ ತಾನು ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು ಸಾಧ್ಯವೇ ಇಲ್ಲ ಎಂದು ಅಮೆರಿಕದ ಮಾಜಿ ಉಪಾಧ್ಯಕ್ಷ ಮೈಕ್ ಪೆನ್ಸ್​ ಹೇಳಿದ್ದಾರೆ. ಆದರೆ, ಅದಕ್ಕೂ ಮುಂಚಿನ ನಾಲ್ಕು ವರ್ಷಗಳಲ್ಲಿ ಅಮೆರಿಕದ ಜನತೆಗಾಗಿ ತಾವು ಮಾಡಿದ ಒಳ್ಳೆಯ ಕಾರ್ಯಗಳಿಗಾಗಿ ಯಾವತ್ತೂ ಹೆಮ್ಮೆಯ ಭಾವನೆ ಇರುತ್ತದೆ ಎಂದು ತಿಳಿಸಿದ್ದಾರೆ.

ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಭೋಜನಕೂಟದಲ್ಲಿ ಮಾತನಾಡಿದ ಪೆನ್ಸ್, "ಜನವರಿ 6ನೇ ದಿನವು ಅಮೆರಿಕ ಇತಿಹಾಸದ ಕರಾಳ ದಿನವಾಗಿತ್ತು. ಆದರೆ ಅತ್ಯಂತ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕ್ಯಾಪಿಟಲ್ ಪೊಲೀಸರು ಹಾಗೂ ಫೆಡರಲ್ ಕಾನೂನು ಅಧಿಕಾರಿಗಳು ಹಿಂಸಾಚಾರವನ್ನು ಹತ್ತಿಕ್ಕಿದರು. ಇದಕ್ಕಾಗಿ ಅವರಿಗೆ ಧನ್ಯವಾದಗಳು." ಎಂದು ಹೇಳಿದರು.

ಅಮೆರಿಕದ ಉಪಾಧ್ಯಕ್ಷರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಪೆನ್ಸ್​ ಅವರಿಗೆ ಈ ಸಂದರ್ಭದಲ್ಲಿ ಬೀಳ್ಕೊಡುಗೆ ಸಲ್ಲಿಸಲಾಯಿತು. ಆಗ ಅಧ್ಯಕ್ಷರಾಗಿದ್ದ ಟ್ರಂಪ್ ಕೈಕೆಳಗೆ ಕೆಲಸ ಮಾಡಿದ ಪೆನ್ಸ್​, ಹಲವಾರು ಕಷ್ಟಗಳನ್ನು ಎದುರಿಸಬೇಕಾಯಿತು. ಅಧ್ಯಕ್ಷ ಟ್ರಂಪ್ ವಿರುದ್ಧ ಪದಚ್ಯುತಿ ಪ್ರಸ್ತಾವನೆಯೂ ಬಂದಿತ್ತು. ಆದರೆ ಇದನ್ನೆಲ್ಲ ಮೀರಿ ತಮ್ಮ ಬಾಸ್​ ಟ್ರಂಪ್​ ಜೊತೆಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದರು ಪೆನ್ಸ್​. ಆದರೆ, ಕ್ಯಾಪಿಟಲ್ ಹಿಂಸಾಚಾರದ ವಿಷಯದಲ್ಲಿ ಮಾತ್ರ ತಾವು ಟ್ರಂಪ್ ನಿಲುವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪೆನ್ಸ್​ ಬಹಿರಂಗವಾಗಿಯೇ ಹೇಳಿದ್ದಾರೆ.

ABOUT THE AUTHOR

...view details