ಮ್ಯಾಂಚೆಸ್ಟರ್:ವಿಶ್ವಕಪ್ ಕ್ರಿಕೆಟ್‌ನಲ್ಲಿ ನಾಳೆ ಟೀಂ ಇಂಡಿಯಾ-ಪಾಕಿಸ್ತಾನ ಪಂದ್ಯ ನಡೆಯಲಿದ್ದು, ಕೋಟ್ಯಂತರ ಕಣ್ಣುಗಳು ಕಾತರದಿಂದ ಕಾಯುತ್ತಿವೆ. ಪಂದ್ಯ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ರು.
ನಾವು ಚೆನ್ನಾಗಿ ಆಡಿದ್ರೆ, ಎಲ್ಲ ತಂಡಗಳ ವಿರುದ್ಧ ಗೆಲುವು: ಕೊಹ್ಲಿ ವಿಶ್ವಾಸ - ವಿರಾಟ್ ಕೊಹ್ಲಿ
ವಿಶ್ವಕಪ್ನಲ್ಲಿ ನಾಳೆ ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದ್ದು, ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ನಾಯಕ ಕೊಹ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ರು.
ಟೀಂ ಇಂಡಿಯಾ ಕ್ಯಾಪ್ಟನ್
ನಾವು ಚೆನ್ನಾಗಿ ಆಡಿದ್ರೆ, ಎಲ್ಲಾ ತಂಡಗಳ ವಿರುದ್ಧ ಗೆಲ್ಲಬಹುದು. ಪಾಕ್ ವಿರುದ್ಧದ ಪಂದ್ಯಕ್ಕಾಗಿ ಯಾವುದೇ ಬದಲಾವಣೆ ಇಲ್ಲ. ತಂಡದ ಎಲ್ಲಾ ಆಟಗಾರರು ವೃತ್ತಿಪರರಾಗಿದ್ದು, ಉತ್ತಮ ಸಾಮರ್ಥ್ಯ ನೀಡಿದರೆ ಗೆಲುವು ಖಚಿತ ಎಂದರು.
ಯಾವುದೇ ಪಂದ್ಯ ನಮಗೆ ಹೆಚ್ಚು ಮಹತ್ವದಾಗಿಲ್ಲ. ಎಲ್ಲ ಪಂದ್ಯಗಳೂ ಒಂದೇ ಸಮನಾಗಿದ್ದು, ಏಕರೀತಿಯ ಪ್ರದರ್ಶನ ನೀಡುವುದು ನಮ್ಮ ಕರ್ತವ್ಯ. ಇಲ್ಲಿಯವರೆಗೆ ನಾವು ಉತ್ತಮ ಪ್ರದರ್ಶನ ನೀಡಿರುವುದರಿಂದಲೇ ವಿಶ್ವಕ್ರಿಕೆಟ್ನಲ್ಲಿ ಗುರುತಿಸಿಕೊಂಡಿದ್ದೇವೆ ಎಂದು ತಿಳಿಸಿದರು.
Last Updated : Jun 15, 2019, 9:04 PM IST