ವಾಷಿಂಗ್ಟನ್:ಇರಾನ್ ವಿರುದ್ಧ ಮತ್ತೆ ಗುಡುಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಒಂದು ವೇಳೆ ಇರಾನ್ ನಮ್ಮೊಂದಿಗೆ ಯುದ್ಧ ಮಾಡಲು ಇಚ್ಛಿಸಿದರೆ, ಆ ದೇಶದ ಅಧಿಕೃತ ಅಂತ್ಯವಾಗಲಿದೆ. ನಮ್ಮನ್ನು ಮತ್ತೊಮ್ಮೆ ಭಯಪಡಿಸುವ ಸಾಹಸಕ್ಕೆ ಕೈ ಹಾಕದಿರಿ ಎಂದು ಟ್ರಂಪ್ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ನಮ್ಮ ದೇಶ ಯಾವುದೇ ರೀತಿಯಲ್ಲೂ ಯುದ್ಧವನ್ನು ಬಯಸುತ್ತಿಲ್ಲ ಎಂದು ಇರಾನ್ ವಿದೇಶಾಂಗ ಸಚಿವರು ಶನಿವಾರ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಟ್ರಂಪ್ ಟ್ವೀಟ್ ಮೂಲಕ ಗುಡುಗಿದ್ದಾರೆ.
ಅಮೆರಿಕ ಹಾಗೂ ಇರಾನ್ ನಡುವಿನ ಸಂಬಂಧ ಕಳೆದೊಂದು ವರ್ಷದಿಂದ ಹದಗೆಡುತ್ತಲೇ ಬರುತ್ತಿದೆ. 2015ರ ಪರಮಾಣು ಒಪ್ಪಂದವನ್ನು ಇರಾನ್ ಮೇಲೆ ಮತ್ತೆ ಹೇರಿಕೆ ಮಾಡಿದ್ದು ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹಳಸಿತ್ತು.