ಕರ್ನಾಟಕ

karnataka

ETV Bharat / briefs

ಹಾಲಿ ಚಾಂಪಿಯನ್​​​​ vs ವಿಂಡೀಸ್​​​​​... ಬಿಗ್​ ಫೈಟ್​ನಲ್ಲಿ ಗೆಲ್ಲೋರ‍್ಯಾರು? - ಫಿಂಚ್​

ತಮ್ಮ ಮೊದಲ ಪಂದ್ಯಗಳಲ್ಲಿ ಏಕಪಕ್ಷೀಯ ಜಯ ಸಾಧಿಸಿರುವ ಏಕದಿನ ಕ್ರಿಕೆಟ್​ನ ಚಾಂಪಿಯನ್ ಆಸೀಸ್​​ ಹಾಗೂ ಟಿ-20 ಚಾಂಪಿಯನ್​ ವಿಂಡೀಸ್​ ತಮ್ಮ ಎರಡನೇ ಪಂದ್ಯದಲ್ಲಿ ಎರಡನೇ ಗೆಲುವಿಗಾಗಿ ಕಾದಾಡಲಿವೆ.

ICC

By

Published : Jun 6, 2019, 12:12 PM IST

ನಾಟಿಂಗ್​ಹ್ಯಾಮ್​: ಸ್ಫೋಟಕ ಆಟಗಾರರ ದಂಡನ್ನೇ ಹೊಂದಿರುವ ವಿಂಡೀಸ್​ ಹಾಗೂ ಐದು ಬಾರಿ ವಿಶ್ವಕಪ್​​​​ ಚಾಂಪಿಯನ್ ಆಗಿರುವ​ ಆಸ್ಟ್ರೇಲಿಯಾ ತಂಡ ಇಂದು ತಮ್ಮ ಎರಡನೇ ಜಯಕ್ಕಾಗಿ ಕಾದಾಡಲಿವೆ.

ಮೊದಲ ಪಂದ್ಯದಲ್ಲಿ ಇದೇ ಕ್ರೀಡಾಂಗಣದಲ್ಲಿ ಪಾಕಿಸ್ತಾನವನ್ನು ಕೇವಲ 105 ರನ್​ಗಳಿಗೆ ಕೆಡವಿದ್ದ ವಿಂಡೀಸ್​ ಕೇವಲ 13.4 ಓವರ್​ಗಳಲ್ಲಿ ಗುರಿ ತಲುಪಿತ್ತು. ಕ್ರಿಸ್​ ಗೇಲ್​ 34 ಎಸೆತಗಳಲ್ಲಿ 50 ರನ್​ ಸಿಡಿಸಿದರೆ, ಬೌಲಿಂಗ್​ನಲ್ಲಿ ಥಾಮಸ್​ 4, ಹೋಲ್ಡರ್​ 3, ರಸೆಲ್​ 2 ವಿಕೆಟ್​ ಪಡೆದು ಮಿಂಚಿದ್ದರು.

ಇಂದು ಕೂಡ ಅದೇ ಕ್ರೀಡಾಂಗಣದಲ್ಲಿ ಆಸೀಸ್​ ವಿರುದ್ಧ ಗೆಲುವು ಪಡೆದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ತವಕದಲ್ಲಿದೆ. ಇನ್ನೂ ಐಪಿಎಲ್​ ಮೂಡಿನಲ್ಲಿರುವ ಗೇಲ್​, ರಸೆಲ್, ಪೂರನ್​ ಜೊತೆಗೆ ಶೈ ಹೋಪ್​ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಇನ್ನು ಬೌಲಿಂಗ್​ನಲ್ಲಿ ಕಾಟ್ರೆಲ್, ಒಸಾನೆ ಥಾಮಸ್​, ಹೋಲ್ಡರ್​ ಉತ್ತಮ ಪ್ರದರ್ಶನ ತೋರುತ್ತಿರುವುರಿಂದ ಆಸೀಸ್​ಗೆ ಪ್ರಬಲ ಪೈಪೋಟಿ ನೀಡಲು ವಿಂಡೀಸ್​ ಸಜ್ಜಾಗಿದೆ.

ಆಸ್ಟ್ರೇಲಿಯಾ

ಇತ್ತ ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗೆಲವು ಸಾಧಿಸಿದ್ದು​ ಈ ಪಂದ್ಯದಲ್ಲೂ ಗೆಲುವು ಪಡೆಯುವ ಆತ್ಮವಿಶ್ವಾಸದಲ್ಲಿದೆ. ವಾರ್ನರ್​, ಫಿಂಚ್​ ಉತ್ತಮ ಫಾರ್ಮ್​ನಲ್ಲಿದ್ದಾರೆ. ಜೊತೆಗೆ ಸ್ಮಿತ್​, ಖವಾಜ ಜೊತೆಗೆ ಮ್ಯಾಕ್ಸ್​ವೆಲ್​ರಂತಹ ಸ್ಫೋಟಕ ಆಟಗಾರರು ಕೂಡ ಪಂದ್ಯವನ್ನು ಬದಲಾಯಿಸಬಲ್ಲ ತಾಕತ್ತು ಹೊಂದಿದ್ದಾರೆ. ಇನ್ನು ಬೌಲಿಂಗ್​ ವಿಭಾಗದಲ್ಲಿ ಮಿಚೆಲ್​ ಸ್ಟಾರ್ಕ್​, ಪ್ಯಾಟ್​​ ಕಮಿನ್ಸ್​, ಕೇನ್​ ರಿಚರ್ಡ್ಸ್​ನ್​, ಕಾರ್ಟರ್​ ಲೈನ್​ ಹಾಗೂ ಜಂಪಾ ಉತ್ತಮ ಲಯದಲ್ಲಿರುವುದರಿಂದ ವೆಸ್ಟ್​ ಇಂಡೀಸ್​ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿದೆ.​

ವೆಸ್ಟ್​ ಇಂಡೀಸ್​

ಮುಖಾಮುಖಿ:

ಆಸ್ಟ್ರೇಲಿಯಾ ಹಾಗೂ ವೆಸ್ಟ್​ ಇಂಡೀಸ್​ ತಂಡಗಳು ಒಟ್ಟು 139 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 73 ಹಾಗೂ ವೆಸ್ಟ್​ ಇಂಡೀಸ್​ 60 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. 3 ಪಂದ್ಯಗಳು ಟೈ ಆಗಿವೆ.

ಇನ್ನು ವಿಶ್ವಕಪ್​ನಲ್ಲಿ 9 ಬಾರಿ ಮುಖಾಮುಖಿಯಾಗಿದ್ದು, ವಿಂಡೀಸ್​ 5 ಹಾಗೂ ಆಸೀಸ್​ 4 ಗೆಲುವು ಸಾಧಿಸಿದೆ.

ವೆಸ್ಟ್​ ಇಂಡೀಸ್​:

ಜಾಸನ್​ ಹೋಲ್ಡರ್( ನಾಯಕ), ಡೆರಾನ್​​ ಬ್ರಾವೋ, ಶಿಮ್ರಾನ್ ಹೆಟ್ಮೈರ್, ನಿಕೋಲಸ್​ ಪೂರನ್​, ಆಂಡ್ರೆ ರಸೆಲ್​, ಶೆಲ್ಡನ್ ಕಾಟ್ರೆಲ್, ಕ್ರಿಸ್​ ಗೇಲ್​, ಶೈ​ ಹೋಪ್​, ಆಶ್ಲೇ ನರ್ಸ್, ಒಶೇನ್ ಥಾಮಸ್, ಕಾರ್ಲೋಸ್​ ಬ್ರಾತ್​ವೈಟ್

ಆಸ್ಟ್ರೇಲಿಯಾ:

ಆ್ಯರೋನ್​ ಫಿಂಚ್(ನಾಯಕ)​, ಅಲೆಕ್ಸ್ ಕ್ಯಾರಿ(ವಿಕೆಟ್​ ಕೀಪರ್​), ಕಾಲ್ಟರ್​-ನೇಲ್​, ಪ್ಯಾಟ್​ ಕಮ್ಮಿನ್ಸ್​​, ಉಸ್ಮಾನ್​ ಖವಾಜ, ನಥನ್​ ಲಯನ್​, ಶಾನ್​ ಮಾರ್ಶ್​​, ಗ್ಲೇನ್​ ಮ್ಯಾಕ್ಸ್​ವೆಲ್, ರಿಚರ್ಡ್​ಸನ್, ಸ್ಟಿವ್​​ ಸ್ಮಿತ್​, ಮಿಚೆಲ್​ ಸ್ಟಾರ್ಕ್​, ಮಾರ್ಕಸ್​ ಸ್ಟೋಯ್ನಿಸ್, ಡೇವಿಡ್​ ವಾರ್ನರ್​, ಆ್ಯಡಮ್​ ಜಂಪಾ.

ABOUT THE AUTHOR

...view details