ಲಂಡನ್:ಫಿಂಚ್ ಸಿಡಿಲಬ್ಬರದ ಶತಕ ಹಾಗೂ ಬೌಲರ್ಗಳ ಸಾಂಘಿಕ ದಾಳಿಯ ಎದುರು ಏಕಾಏಕಿ ಕುಸಿದ ಶ್ರೀಲಂಕಾ ಐಸಿಸಿ ವಿಶ್ವಕಪ್ನಲ್ಲಿ ಮತ್ತೊಂದು ಸೋಲು ಕಂಡಿದೆ. ಇತ್ತ ಜವಾಬ್ದಾರಿಯುತ ಗೆಲುವು ದಾಖಲು ಮಾಡಿರುವ ಕಾಂಗರೂ ಪಡೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ಅಮೋಘ ಶತಕ ಹಾಗೂ ಸ್ಟೀವ್ ಸ್ಮಿತ್ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 334 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.
ಬೃಹತ್ ಗುರಿ ಬೆನ್ನಟ್ಟಿದ ಲಂಕಾ ಬಿರುಸಿನ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಕ್ಯಾಪ್ಟನ್ ದಿಮುತ್ ಕರುಣರತ್ನೆ ಹಾಗೂ ಕುಸಾಲ್ ಪರೇರಾ ಮೊದಲ ವಿಕೆಟ್ ನಷ್ಟಕ್ಕೆ 15.3 ಓವರ್ಗಳಲ್ಲೇ 115ರನ್ ಪೇರಿಸಿತು. ಈ ವೇಳೆ 56 ರನ್ ಗಳಿಸಿದ್ದ ಪರೇರಾ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಕರುಣರತ್ನೆ ಜತೆ ಕ್ರೀಸ್ ಹಂಚಿಕೊಂಡ ತಿರುಮನ್ನೆ 16 ರನ್ ಗಳಿಸಿ ನಿರಾಸೆ ಮೂಡಿಸಿದರು. ಇದಾದ ಬಳಿಕ ಬಂದ ಕುಸಾಲ್ ಮೆಂಡಿಸ್ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು.