ಕರ್ನಾಟಕ

karnataka

ETV Bharat / briefs

ವಿಶ್ವಕಪ್​ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರಿವರು .. ಭಾರತದ ಇಬ್ಬರಿಗೆ ಸಿಕ್ಕಿದೆ ಈ ಶ್ರೇಷ್ಠ ಗೌರವ - ಭಾರತ

1975 ರಿಂದ 2015ರವರೆಗೆ ನಡೆದಿರುವ 11 ವಿಶ್ವಕಪ್​ಗಳಲ್ಲಿ 3 ವಿಶ್ವಕಪ್​ಗಳಲ್ಲಿ ಚಾಂಪಿಯನ್​ ತಂಡದ ಆಟಗಾರರ ಬದಲು ಬೇರೆ ತಂಡಗಳ ಆಟಗಾರರು ಸರಣಿ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಉಳಿದ 8 ಬಾರಿ ಚಾಂಪಿಯನ್​ ತಂಡದ ಆಟಗಾರರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ

icc

By

Published : May 27, 2019, 7:19 PM IST

ಮುಂಬೈ: ವಿಶ್ವಕ್ರಿಕೆಟ್​ನಲ್ಲಿ ಇದುವರೆಗೆ 11 ವಿಶ್ವಕಪ್​ಗಳು ಯಶಸ್ವಿಯಾಗಿ ನಡೆದಿದ್ದು, 2 ಬಾರಿ ಚಾಂಪಿಯನ್​ ಆಗಿರುವ ಭಾರತ ತಂಡದ ಮೂವರು ಆಟಗಾರರು 3 ಆವೃತ್ತಿಗಳಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ( 1983 ರಲ್ಲಿ ಮೊಹಿಂದರ್​ ಅಮರ್​ನಾಥ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು)

1975 ರಿಂದ 2015ರವರೆಗೆ ನಡೆದಿರುವ 11 ವಿಶ್ವಕಪ್​ಗಳಲ್ಲಿ 3 ವಿಶ್ವಕಪ್​ಗಳಲ್ಲಿ ಚಾಂಪಿಯನ್​ ತಂಡದ ಆಟಗಾರರ ಬದಲು ಬೇರೆ ತಂಡಗಳ ಆಟಗಾರರು ಸರಣಿ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಉಳಿದ 8 ಬಾರಿ ಚಾಂಪಿಯನ್​ ತಂಡದ ಆಟಗಾರರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

1975ರಿಂದ 87 ರವೆಗೆ ನಡೆದ 4 ವಿಶ್ವಕಪ್​ಗಳಲ್ಲಿ ಫೈನಲ್​ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಮಾತ್ರ ಅವಾರ್ಡ್​ ನೀಡಲಾಗುತ್ತಿತ್ತು. ಐಸಿಸಿ 1992 ರಿಂದ ಒಟ್ಟಾರೆ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನನ್ನು ಸರಣಿ ಶ್ರೇಷ್ಠ ಆಟಗಾರ ಎಂಬ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.

1975 ರ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಶತಕ ಸಿಡಿಸಿದ ವಿಂಡೀಸ್ ​ನಾಯಕ ಕ್ಲೈವ್​ ಲಾಯ್ಡ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ. ಈ ಪಂದ್ಯದಲ್ಲಿ ಲಾಯ್ಡ್​ 85 ಎಸೆತಗಳಲ್ಲಿ 102 ರನ್​ಗಳಿಸಿದ್ದರು.

1979 ವಿವಿಯನ್​ ರಿಚರ್ಡ್ಸ್​

ಎರಡನೇ ವಿಶ್ವಕಪ್​ನಲ್ಲೂ ಇಂಗ್ಲೆಂಡ್ ವಿರುದ್ಧ ಫೈನಲ್​ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್​ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಈ ಪಂದ್ಯದಲ್ಲಿ ರಿಚರ್ಡ್ಸ್​ ಔಟಾಗದೆ 138 ರನ್​ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.​

1983 ಮೊಹಿಂದರ್​ ಅಮರ್​ನಾಥ್​
3 ನೇ ವಿಶ್ವಕಪ್​ನಲ್ಲಿ ವಿಶ್ವಕ್ಕೆ ಶಾಕ್​ ನೀಡಿ ಚಾಂಪಿಯನ್​ ಆಗಿದ್ದ ಭಾರತ ತಂಡದ ಆಲ್​ರೌಂಡರ್​ ಮೊಹಿಂದರ್​ ಅಮರ್​ನಾಥ್​ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಅಮರ್​ನಾಥ್​ 12 ರನ್​ ನೀಡಿ 3 ವಿಕೆಟ್​ ಜೊತೆಗೆ ಬ್ಯಾಟಿಂಗ್​ನಲ್ಲೂ ಮಿಂಚಿದ್ದು 26 ರನ್​ಗಳಿಸಿದ್ದರು.

1987 ಡೇವಿಡ್​ ಮೂನ್​
ನಾಲ್ಕನೇ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಿ ಚಾಂಪಿಯನ್​ ಆಗಿತ್ತು. ಈ ಪಂದ್ಯದಲ್ಲಿ ಆಸೀಸ್​ನ ಡೇವಿಡ್​ ಬೂನ್​ 75 ರನ್​ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

1992 ರಿಂದ ಇಡೀ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಯಾವುದೇ ತಂಡದ ಆಟಗಾರನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಐಸಿಸಿ ನಿರ್ದರಿಸಿತ್ತು.

1992 ಮಾರ್ಟಿನ್​ ಕ್ರೋವ್
ಆಸ್ಟ್ರೇಲಿಯಾದಲ್ಲಿ ನಡೆದಿದ್ದ 5 ನೇ ವಿಶ್ವಕಪ್​ನಲ್ಲಿ ಸೆಮಿಫನಲ್​ ಪ್ರವೇಶಿಸಿದ್ದ ನ್ಯೂಜಿಲ್ಯಾಂಡ್​ ತಂಡದ ನಾಯಕ ಟೂರ್ನಿಯಲ್ಲಿ 456 ರನ್​ಗಳಿಸಿ ಚೊಚ್ಚಲ ಸರಣಿ ಸರ್ವೋತ್ತಮ ಪ್ರಶಸ್ತಿ ಪಡೆದುಕೊಂಡಿದ್ದರು. ಈ ವಿಶ್ವಕಪ್​ ಪಾಕಿಸ್ತಾನ ಪಾಲಾಗಿತ್ತು.

1996 ಸನತ್​ ಜಯಸೂರ್ಯ
ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನದಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಚಾಂಪಿಯನ್​ ಆಗಿದ್ದ ಲಂಕಾದ ಆಟಗಾರ ಸನತ್ ಜಯಸೂರ್ಯ 221 ರನ್​ ಹಾಗೂ 7 ವಿಕೆಟ್​ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

1999 ಲಾನ್ಸ್​ ಕ್ಲೂಸ್ನರ್​​​
ಇಂಗ್ಲೆಂಡ್​ನಲ್ಲಿ ನಡೆದಿದ್ದ 6ನೇ ವಿಶ್ವಕಪ್​ನಲ್ಲಿ ಸೆಮಿಫೈನಲ್​ನಲ್ಲಿ ಸೋಲನುಭವಿಸಿದ್ದ ದ.ಆಫ್ರಿಕಾ ತಂಡದ ಆಲ್​ರೌಂಡರ್​ ಲಾನ್ಸ್​ ಕ್ಲೂಸ್ನರ್​​ ​ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಸೆಮಿಫೈನಲ್​ ಪಂದ್ಯದಲ್ಲಿ 3 ಬಾಲ್​​ಗೆ ಒಂದು ರನ್​ ತೆಗೆಯಲಾಗದೇ ಆತುರ ಪಟ್ಟು ಫೈನಲ್​ ತಲುಪುವ ಅವಕಾಶವನ್ನು ದ.ಆಫ್ರಿಕಾ ಕಳೆದುಕೊಂಡಿತು. ಆಸ್ಟ್ರೇಲಿಯಾ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್​ ಆಗಿತ್ತು.

2003 ಸಚಿನ್​ ತೆಂಡೂಲ್ಕರ್
ಗಂಗೂಲಿ ನೇತೃತ್ವದಲ್ಲಿ ಫೈನಲ್​ ತಲುಪಿದ್ದ ಭಾರತ ತಂಡ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ನಿರಾಸೆಯನುಭವಿಸಿತ್ತು. ಆ ಸರಣಿಯಲ್ಲಿ ಸಚಿನ್​ ತೆಂಡೂಲ್ಕರ್​ ದಾಖಲೆಯ 673 ರನ್​ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಈ ದಾಖಲೆ ಇನ್ನು ಸಚಿನ್​ ಹೆಸರಿನಲ್ಲಿದೆ.

2007 ಗ್ಲೇನ್​ ಮೆಕ್​ಗ್ರಾತ್​
ವೆಸ್ಟ್​ ಇಂಡೀಸ್​ನಲ್ಲಿ ನಡೆದಿದ್ದ ಈ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್​ ಗ್ಲೇನ್​ ಮೆಕ್​ಗ್ರಾತ್​ ದಾಖಲೆಯ 26 ವಿಕೆಟ್​ ಪಡೆದು ಸರಣಿ ಸರ್ವೋತ್ತಮರಾಗಿದ್ದರು. ಶ್ರೀಲಂಕಾ ತಂಡವನ್ನು ಮಣಿಸಿ ಆಸ್ಟ್ರೇಲಿಯಾ ಹ್ಯಾಟ್ರಿಕ್​ ಪ್ರಶಸ್ತಿ ಜಯಿಸಿತ್ತು.

2011 ಯುವರಾಜ್​ ಸಿಂಗ್​
ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳಲ್ಲಿ ನಡೆದಿದ್ದ 10 ನೇ ವಿಶ್ವಕಪ್​ನಲ್ಲಿ ಭಾರತದ ಆಲ್​ರೌಂಡರ್​ ಯುವರಾಜ್​ ಸಿಂಗ್​ 362 ರನ್​ ಹಾಗೂ 15 ವಿಕೆಟ್​ ಪಡೆದು ಆಲ್​ರೌಂಡರ್​ ಪ್ರದರ್ಶನ ನೀಡುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

2015 ಮಿಚೆಲ್​ ಸ್ಟಾರ್ಕ್​
ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ನಲ್ಲಿ ನಡೆದಿದ್ದ 11 ನೇ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ ಮಿಚೆಲ್​ ಸ್ಟಾರ್ಕ್ 22 ವಿಕೆಟ್​ ಪಡೆಯುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಫೈನಲ್​ ಪಂದ್ಯದಲ್ಲಿ ಕಿವೀಸ್​ ಮಣಿಸಿ ಆಸೀಸ್​ 5ನೇ ಬಾರಿ ಚಾಂಪಿಯನ್​ ಆಗಿತ್ತು.

ABOUT THE AUTHOR

...view details