ಲಂಡನ್:ತಮ್ಮಅತ್ತೆ ನಿಧನರಾದ ಹಿನ್ನೆಲೆ ವಿಶ್ವಕಪ್ ಟೂರ್ನಿಯನ್ನು ಮೊಟಕುಗೊಳಿಸಿ ಲಂಕಾದ ಸ್ಟಾರ್ ಬೌಲರ್ ಲಸಿತ್ ಮಲಿಂಗಾತವರಿಗೆ ದೌಡಾಯಿಸಿದ್ದಾರೆ.
ಇಂದು ಲಂಕಾ ತಂಡ ಬ್ರಿಸ್ಟೋಲ್ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಬೇಕಿತ್ತು. ಆದರೆ ಮಲಿಂಗಾ ಅವರ ಅತ್ತೆ ನಿಧನದ ಸುದ್ದಿ ತಿಳಿದ ತಕ್ಷಣ ಯಾರ್ಕರ್ ಕಿಂಗ್ ಅನಿವಾರ್ಯವಾಗಿ ತವರಿಗೆ ಮರಳಿದ್ದಾರೆ.
ಮೊದಲೆರಡು ಪಂದ್ಯಗಳಿಂದ 35 ವರ್ಷದ ಮಲಿಂಗಾ 3 ವಿಕೆಟ್ ಪಡೆದಿದ್ದಾರೆ. ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಪ್ರಮುಖ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಅನುಭವಿ ವೇಗಿಯ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಬೇಕಾದ ಸ್ಥಿತಿಯಲ್ಲಿ ಶ್ರೀಲಂಕಾ ಇದ್ದು, ಇವರ ಜಾಗಕ್ಕೆ ಯಾರನ್ನು ಕಣಕ್ಕಿಳಿಸಲಿದೆ ಕಾದು ನೋಡಬೇಕಿದೆ.