ಕರ್ನಾಟಕ

karnataka

ETV Bharat / briefs

ಓಪನರ್​ ಆಗಿ ರಾಹುಲ್​​​​, 4ನೇ ಸ್ಥಾನದಲ್ಲಿ ಕಾರ್ತಿಕ್​ಗೆ ಅವಕಾಶ ನೀಡಿ: ಕಿರಣ್​​​​ ಮೋರೆ ಸಲಹೆ - ಇಂಗ್ಲೆಂಡ್​

ಧವನ್​ ಗಾಯಗೊಂಡಿರುವುದು ಭಾರತ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಆದರೆ ಭಯಪಡುವ ಅಗತ್ಯವಿಲ್ಲ. ಏಕೆಂದರೆ ತಂಡದಲ್ಲಿ ಫಿಟ್​ ಇರುವ ಆಟಗಾರರು ಬ್ಯಾಕ್​ ಇರುವುದರಿಂದ ಅವರನ್ನು 11ರ ಬಳಗದಲ್ಲಿ ಆಡಿಸಬಹುದು ಎಂದಿರುವ ಮಾಜಿ ವಿಕೆಟ್​ ಕೀಪರ್​ ಕಿರಣ್​ ಮೋರೆ, ಧವನ್​ ಸ್ಥಾನಕ್ಕೆ ರಾಹುಲ್​​ ಹೆಸರು ಸೂಚಿಸಿದ್ದಾರೆ.

icc

By

Published : Jun 11, 2019, 8:21 PM IST

ಲಂಡನ್​:ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿಖರ್​ ಧವನ್​ ಹೆಬ್ಬೆರಳು ಮುರಿತಕ್ಕೆ ಒಳಗಾಗಿರುವುದರಿಂದ ಆರಂಭಿಕನಾಗಿ ಕೆ.ಎಲ್.ರಾಹುಲ್​ರನ್ನು, 4ನೇ ಸ್ಥಾನಕ್ಕೆ ದಿನೇಶ್​ ಕಾರ್ತಿಕ್​ರನ್ನು ಕಣಕ್ಕಿಳಿಸಿ ಎಂದು ಮಾಜಿ ಕ್ರಿಕೆಟಿಗ ಕಿರಣ್​ ಮೋರೆ ಸಲಹೆ ನೀಡಿದ್ದಾರೆ.

ಧವನ್​ ಗಾಯಗೊಂಡಿರುವುದು ಭಾರತ ತಂಡದಕ್ಕೆ ದೊಡ್ಡ ಹೊಡೆತವಾಗಿದೆ. ಆದರೆ ಭಯಪಡುವ ಅಗತ್ಯವಿಲ್ಲ. ಏಕೆಂದರೆ ತಂಡದಲ್ಲಿ ಫಿಟ್​ ಇರುವ ಆಟಗಾರರು ಬ್ಯಾಕ್​ ಇರುವುದರಿಂದ ಅವರನ್ನು 11ರ ಬಳಗದಲ್ಲಿ ಆಡಿಸಬಹುದು ಎಂದಿರುವ ಮಾಜಿ ವಿಕೆಟ್​ ಕೀಪರ್​ ಮೋರೆ, ಧವನ್​ ಸ್ಥಾನಕ್ಕೆ ರಾಹುಲ್​​ ಹೆಸರು ಸೂಚಿಸಿದ್ದಾರೆ.

ಕಿರಣ್​ ಮೋರೆ

ಧವನ್​ ಐಸಿಸಿ ಟೂರ್ನಮೆಂಟ್​ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅವರ ಅನುಪಸ್ಥಿತಿಯಲ್ಲಿ ಕೊಹ್ಲಿಗೆ ರಾಹುಲ್​ರನ್ನು ಆಡಿಸುವಂತೆ ಸಲಹೆ ನೀಡುತ್ತೇನೆ. ರಾಹುಲ್​ ಆರಂಭಿಕ ಸ್ಥಾನಕ್ಕೆ ಅತ್ಯುತ್ತಮ ಆಯ್ಕೆ ಎಂದು ತಿಳಿಸಿದ್ದಾರೆ.

ರಾಹುಲ್​ ಆರಂಭಿಕನಾದರೆ, 4ನೇ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಕಿರಣ್​ ಮೋರೆ, ದಿನೇಶ್​ ಕಾರ್ತಿಕ್​ ಹೆಸರನ್ನು ಸೂಚಿಸಿದ್ದಾರೆ. ಕಾರ್ತಿಕ್​ ಬ್ಯಾಟ್​ ಹಾಗೂ ಫೀಲ್ಡಿಂಗ್​ ಅಲ್ಲದೆ ಅವಶ್ಯಕವಿದ್ದರೆ ಕೀಪಿಂಗ್​ ಕೂಡ ಮಾಡಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details