ಕರ್ನಾಟಕ

karnataka

ETV Bharat / briefs

ವಿಶ್ವಕಪ್​ ಸಮರ: ದೇವರೇ ಪ್ರತಿಯೊಬ್ಬರನ್ನು ಸೋಸಿ ತೆಗೆಯುತ್ತಾನೆ : ಕೊಹ್ಲಿ ಮಾತಿನ ಮರ್ಮವೇನು?

2019ರ ವಿಶ್ವಕಪ್​ ಹಿನ್ನೆಲೆಯಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವಿರಾಟ್​ ಕೊಹ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು 2018-19 ನೇ ಸಾಲಿನ ಕ್ರಿಕೆಟ್​​ ತುಂಬಾ ಸವಾಲಿನಿಂದ ಕೂಡಿತ್ತು ಎಂದಿದ್ದಾರೆ.

ಕೊಹ್ಲಿ

By

Published : May 15, 2019, 11:28 AM IST

Updated : May 15, 2019, 3:33 PM IST

ಮುಂಬೈ: ನಾನು ಏನಾಗಬೇಕು ಎಂಬುದನ್ನು7 ವರ್ಷಗಳ ಹಿಂದೆಯೇ ದೇವರು ನಿರ್ಧರಿಸಿದ್ದ. ಈಗ ನನಗೆ 30 ತುಂಬಿ 31 ವರ್ಷ. ದೇವರೇ ಪ್ರತಿಯೊಬ್ಬನ ಶೋಧಕನಂತೆ ಕೆಲಸ ಮಾಡುತ್ತಾನೆ ಎಂದು ಕೊಹ್ಲಿ ಆಧ್ಯಾತ್ಮಿಕವಾಗಿ ಮಾತನಾಡಿದ್ದಾರೆ.

2019ರ ವಿಶ್ವಕಪ್​ ಹಿನ್ನೆಲೆಯಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವಿರಾಟ್​ ಕೊಹ್ಲಿ, ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2018-19ನೇ ಸಾಲಿನ ಕ್ರಿಕೆಟ್​​ ತುಂಬಾ ಸವಾಲಿನಿಂದ ಕೂಡಿತ್ತು ಎಂದಿದ್ದಾರೆ.

ಹೆಚ್ಚಿನ ಓದಿಗಾಗಿ :

ವಿಶ್ವಕಪ್​ ಟೀಮ್​ನಿಂದ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ.. ಅದೇ ಫಾರ್ಮ್‌ ಕಂಟಿನ್ಯೂವಾದ್ರೇ ವರ್ಲ್ಡ್‌ಕಪ್‌ ನಮ್ದೇ!

ಜನವರಿ 2018ರಿಂದ ಈವರೆಗೂ ಎದುರಿಸಿದ ಸವಾಲುಗಳ ಬಗ್ಗೆ ಹೆಮ್ಮೆ ಎನಿಸುತ್ತಿದೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ ಅತ್ಯಂತ ದೊಡ್ಡ ಸವಾಲು ಎದುರಿಸಿದ್ದೇವೆ. ಕೆಲವು ಪಂದ್ಯಗಳಲ್ಲಿ ವಿಫಲವಾಗಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸು​ ಕಂಡಿದ್ದೇವೆ. ಆದರೆ, ನಮಗೆ ಏನು ಬೇಕು ಅನ್ನೋದರ ಬಗ್ಗೆ ಮೊದಲೇ ತಲೆಯಲ್ಲಿ ಇತ್ತು ಎಂದೂ ಕೊಹ್ಲಿ ಹೇಳಿಕೊಂಡಿದ್ದಾರೆ.

ನನ್ನ ಆಟದಿಂದ ಕೆಲವರು ಸ್ಪೂರ್ತಿ ಹೊಂದುತ್ತಾರೆ. ಅದಕ್ಕಾಗಿ ನಾನೇನು ಮಾಡಬೇಕು ಎಂಬ ಬಗ್ಗೆ ಖಂಡಿತಾ ಯೋಚಿಸಿರಲಿಲ್ಲ. ಮೊದಲಿಗೆ ನನ್ನ ಆದ್ಯತೆ ಇದ್ದದ್ದು ಕೇವಲ ಭಾರತ ತಂಡಕ್ಕಾಗಿ ಆಡುವುದು ಹಾಗೂ ಬಹಳಷ್ಟು ದಿನ ನೆಲೆ ನಿಲ್ಲುವುದೇ ಆಗಿತ್ತು ಎಂದು ವಿರಾಟ್​ ಕೊಹ್ಲಿ ತಮ್ಮ ಗುರಿಯನ್ನ ಬಿಚ್ಚಿಟ್ಟಿದ್ದಾರೆ.

Last Updated : May 15, 2019, 3:33 PM IST

ABOUT THE AUTHOR

...view details