ಲಂಡನ್:ಇಂಗ್ಲೆಂಡ್ ವಿರುದ್ಧ ಪಂದ್ಯ ಸೋತರು ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಮಹತ್ವದ ದಾಖಲೆಗೆ ಪಾತ್ರರಾಗಿದ್ದಾರೆ.
ನಿನ್ನೆ ಸೌತಾಂಪ್ಟನ್ನಲ್ಲಿ ನಡೆದ ಪಂದ್ಯದಲ್ಲಿ 36 ರನ್ಗಳಿಸಿದ ಯುನಿವರ್ಸಲ್ ಬಾಸ್ ಖ್ಯಾತಿಯ ಗೇಲ್ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
ನಿನ್ನೆ ನಡೆದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ 1,596 ರನ್ಗಳಿಸಿದ್ದರು. ನಿನ್ನೆ ಕ್ರಿಸ್ ಗೇಲ್ 36 ರನ್ಗಳಿಸುವ ಮೂಲಕ ಇಂಗ್ಲೆಂಡ್ ವಿರುದ್ಧ 1,625 ರನ್ಗಳಿಸಿ ಹೆಚ್ಚು ರನ್ ದಾಖಲೆಹೊಂದಿದ್ದ ಶ್ರೀಲಂಕಾದ ಕುಮಾರ್ ಸಂಗಾಕ್ಕರ ಅವರ ದಾಖಲೆ ಮುರಿದರು. ಇದಕ್ಕೂ ಮುನ್ನ ಕ್ರಿಸ್ ವೋಕ್ಸ್ ಬೌಲಿಂಗ್ನಲ್ಲಿ ಬೌಂಡರಿ ಬಾರಿಸುವ ಮೂಲಕ ವಿಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್ ದಾಖಲೆ ಬ್ರೇಕ್ ಮಾಡಿದ್ದರು. ವಿವಿಯನ್ ರಿಚರ್ಡ್ಸ್ ಇಂಗ್ಲೆಂಡ್ ವಿರುದ್ದ 1619 ರನ್ಗಳಿಸಿದ್ದರು.
ಏಕದಿನ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಹೆಚ್ಚು ರನ್ಗಳಿಸಿದವರು:
ಕ್ರಿಸ್ ಗೇಲ್ 1632
ಕುಮಾರ್ ಸಂಗಾಕ್ಕರ 1625
ವಿವಿಯನ್ ರಿಚರ್ಡ್ಸ್ 1619
ರಿಕಿ ಪಾಂಟಿಂಗ್ 1598
ಮಹೇಲಾ ಜಯವರ್ದನೆ 1562