ನವದೆಹಲಿ: ಐಸಿಸಿ ಆಡಳಿತ ಮಂಡಳಿ ಸಭೆ ಮಂಗಳವಾರದಂದು ವರ್ಚುಯಲ್ ಆಗಿ ನಡೆಯಲಿದ್ದು, ಟಿ-20 ವಿಶ್ವಕಪ್ ಆಯೋಜನೆ ಬಗ್ಗೆ ನಿರ್ಧಾರ ಕೈಗೊಳ್ಳಲು ಬಿಸಿಸಿಐ ಒಂದು ತಿಂಗಳ ಕಾಲಾವಕಾಶ ಕೋರುವ ಸಾಧ್ಯತೆ ಇದೆ.
ಐಸಿಸಿ ಮೀಟಿಂಗ್: ವಿಶ್ವಕಪ್ ನಿರ್ಧಾರಕ್ಕೆ ಬಿಸಿಸಿಐ ಸಮಯಾವಕಾಶ ಕೋರುವ ಸಾಧ್ಯತೆ - ಐಸಿಸಿ ವರ್ಚುವಲ್ ಮೀಟಿಂಗ್
ಮಂಗಳವಾರದಂದು ಐಸಿಸಿ ಆಡಳಿತ ಮಂಡಳಿ ಸಭೆ ವರ್ಚುಯಲ್ ಆಗಿ ನಡೆಯಲಿದ್ದು, ವಿಶ್ವಕಪ್ ಆಯೋಜನೆ ಬಗ್ಗೆ ನಿರ್ಧಾರ ಕೈಗೊಳ್ಳಲು ಬಿಸಿಸಿಐ ಸಮಯಾವಕಾಶ ಕೋರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಭೆಯಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈಗೆ ತೆರಳಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಅವರು ವರ್ಚುಯಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಆಯೋಜನೆ ಬಗ್ಗೆ ಎಮಿರೇಟ್ ಕ್ರಿಕೆಟ್ ಮಂಡಳಿ ಜೊತೆ ಚರ್ಚಿಸಲು ಅವರು ದುಬೈಗೆ ಹೋಗಿದ್ದಾರೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬರಲಿಲ್ಲ. ಹೀಗಾಗಿ ಟೂರ್ನಿ ಆಯೋಜನೆಗೆ ಸಂಬಂಧಿಸಿ ಭರವಸೆ ಕೊಡಲು ಸಾಧ್ಯವಿಲ್ಲ. ಅಧ್ಯಕ್ಷರು ಮತ್ತು ಕಾರ್ಯದರ್ಶಿ ಒಂದು ತಿಂಗಳ ಕಾಲಾವಕಾಶ ಕೋರಲು ಸಜ್ಜಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.